ಸಂಘಟನೆಯ ಬಗ್ಗೆ ನಂಬಿಕೆಯನ್ನು ಬೆಳೆಸಿಕೊಳ್ಳಿ: ಜಯರಮ ರೈ,ರಿಕ್ಷಾ ಚಾಲಕ ,ಮಲಕಾರ ಸಂಘ ಬಿಎಂಎಸ್ ಬಂಟ್ವಾಳ ತಾ.ಘಟಕದ ಮಹಾಸಭೆ
ಬಂಟ್ವಾಳ: ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಬಿ.ಎಂ.ಎಸ್. ಬಂಟ್ವಾಳ ತಾಲೂಕು ಘಟಕದ 36 ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆಯಿತು.
ಸಂಘದ ಕಾನೂನು ಸಲಹೆಗಾರರು,ಬಿ.ಸಿ.ರೋಡಿನ ನ್ಯಾಯವಾದಿ ಜಯರಾಮ ರೈ ಸಭೆಯನ್ನುಉದ್ಘಾಟಿಸಿ ಮಾತನಾಡಿ, ಸಂಘಟನೆಯ ಬಗ್ಗೆ, ಪ್ರೀತಿ, ವಿಶ್ವಾಸ,ನಂಬಿಕೆಯನ್ನು ಬೆಳೆಸಿಕೊಂಡಾಗ ತಾನು ಬೆಳೆಯುವುದರ ಜೊತೆಗೆ ಸಂಘಟನೆ ಕೂಡ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅವರು ಮಾತನಾಡಿ,ರಿಕ್ಷಾ ಚಾಲಕರ ಶ್ರೇಯೋಭಿವೃದ್ದಿಗಾಗಿ ಮಂಡಳಿಯ ಮೂಲಕ ಉಪಯೋಗವನ್ನು ಪಡೆದು ಬದುಕು ಹಸನಾಗಿಸುವಂತೆ ತಿಳಿಸಿದರಲ್ಲದೆ
ಚಾಲಕರು ರಾಷ್ಟ್ರೀಯ ಚಿಂತನೆಯನ್ನು ಬೆಳಸಿಕೊಳ್ಳಬೇಕು ಎಂದರು.
ಸಂಘದ ಬಂಟ್ವಾಳ ತಾಲುಕು ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ.ಮರೀಟಾ ಅವರು ರಿಕ್ಷಾ ಚಾಲಕರಿಗೆ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ, ಪುತ್ತೂರು ಘಟಕದ ಅದ್ಯಕ್ಷ ರಾಜೇಶ್ ಮರೀಲು, ಸುಳ್ಯಘಟಕದ ಅಧ್ಯಕ್ಷ ರಾಧಾಕೃಷ್ಣ ಸುಳ್ಯ, ಬೆಳ್ತಂಗಡಿಘಟಕದ ಅಧ್ಯಕ್ಷ ಕೃಷ್ಣ ಬೆಳಾಲು, ಮೂಡುಬಿದಿರೆ ಘಟಕದ ಅಧ್ಯಕ್ಷ ದೀಪಕ್ ರಾಜ್,
ಬಂಟ್ವಾಳ ತಾಲೂಕಿನ
ಸಂಘಟನಾ ಕಾರ್ಯದರ್ಶಿ ಕೃಷ್ಣ ಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು.
ತಾಲೂಕಿನ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನೆಲ್ಯಡ್ಕ ವಾರ್ಷಿಕ ವರದಿ ವಾಚಿಸಿದರು.
ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ ಸ್ವಾಗತಿಸಿದರು. ಆನಂದ ಶೆಟ್ಟಿ ವಂದಿಸಿದರು.ಉಮಾಶಂಕರ್ ಬಡ್ಡಕಟ್ಟೆ ಕಾರ್ಯಕ್ರಮ ನಿರೂಪಿಸಿದರು.