Published On: Thu, Dec 5th, 2024

ಐಎಫ್ಎ ಯ ಮ್ಯೂಸಿಯಂ ಯೋಜನೆಗೆ ಪ್ರಸ್ತಾವನೆ ಆಹ್ವಾನ : ಡಿ.7,8: ಮುಖಾಮುಖಿ ಸಭೆ

ಬಂಟ್ವಾಳ : ಐಎಫ್‌ಎ ಸಂಸ್ಥೆಯು ತನ್ನ ಆರ್ಕೈವ್ಸ್ ಮತ್ತು ಮ್ಯೂಸಿಯಂ ಕಾರ್ಯಕ್ರಮದಡಿಯಲ್ಲಿ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಸಹಯೋಗದೊಂದಿಗೆ ಐಎಫ್‌ಎ-ರಾಣಿ ಅಬ್ಬಕ್ಕ ತುಳು ಮೂಸಿಯಂ ಸ್ಕಾಲರ್‌ಲಿ (ವಿದ್ವತ್ಪೂರ್ಣ) ಅಂಡ್ ಕ್ರಿಯಟಿವ್ (ಮತ್ತು ಸೃಜನಶೀಲ) ಪ್ರಾಜೆಕ್ಷ್ಯಳಿಗಾಗಿ ಪ್ರಸ್ತಾವನೆಯ ಅರ್ಜಿಗಳನ್ನು ಆಹ್ವಾನಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮುಖಾಮುಖಿ ಸಭೆಗಳನ್ನು ಡಿಸೆಂಬರ್ 7 ಮತ್ತು 8 ರಂದು ಬಿ.ಸಿ.ರೋಡು ಹಾಗೂ ಮಂಗಳೂರಿನಲ್ಲಿ ಆಯೋಜಿಸಿದೆ.

 ಡಿ.7 ರಂದು ಸಂಜೆ  4.30ಕ್ಕೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮುಖಾಮುಖಿ ಸಭೆ ನಡೆಯಲಿದ್ದು, ಮಂಗಳೂರಿನ ಕೊಡಿಯಾಲ್ ಗುತ್ತುವಿನ ಇಂಟ್ಯಾಕ್ ಮಂಗಳೂರು ಚಾಪ್ಟರ್ ನಲ್ಲಿ ಡಿ.8 ರಂದು ಬೆಳಿಗ್ಗೆ 11.30 ಕ್ಕೆ ಸಭೆ ನಡೆಯಲಿದೆ.

ಪ್ರಾಜೆಕ್ಟ್ ಕುರಿತಾಗಿ   ರಾಣಿ ಅಬ್ಬಕ್ಕ ತುಳು ಸಂಗ್ರಹಾಲಯದ ಸ್ಥಾಪಕರಾದ ಡಾ. ತುಕಾರಾಮ್ ಪೂಜಾರಿ, ಐಎಫ್ ಎ ಯ  ಪತ್ರಾಗಾರಗಳು ಮತ್ತು ವಸ್ತುಸಂಗ್ರಹಾಲಯದ ಕಾರ್ಯಕ್ರಮ ನಿರ್ವಹಣಾಧಿಕಾರಿ ರಿತಿಕಾ ಮಿಶ್ರಾ, ಕಲಾಶಿಕ್ಷಣದ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಟಿಎನ್ ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡುವರು.

ಆಸಕ್ತ ಕಲಾವಿದರು, ಸಂಶೋಧಕರು. ಶಿಕ್ಷಕರು, ವಿಮರ್ಶಕರು, ಸಾಹಿತಿಗಳು, ಪತ್ರಕರ್ತರು, ಇತಿಹಾಸಕಾರರು, ಜಾನಪದ ತಜ್ಞರು, ಭಾಷಾತಜ್ಞರು, ವಸ್ತುಸಂಗ್ರಹಕಾರರು ಈ ಸಭೆಯಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಎಂದು ಡಾ.ತುಕಾರಾಮ್ ಪೂಜಾರಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter