ಬೋಳಂತೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಗ್ಯಾರಂಟಿ ಯೋಜನೆ ವಿಲೇವಾರಿ ಶಿಬಿರ
ಬಂಟ್ವಾಳ : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ಬಾಳ್ತಿಲ,ಗೋಳ್ತಮಜಲು, ವೀರಕಂಭ,ಬೊಳಾಂತುರು ಗ್ರಾಮಗಳನ್ನು ಒಳಗೊಂಡು ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಬೋಳಂತೂರು ಗ್ರಾ.ಪಂ ಕಛೇರಿಯಲ್ಲಿ ನಡೆಯಿತು.
ಬೋಳಂತೂರು ಗ್ರಾ.ಪಂ ಅದ್ಯಕ್ಷರಾದ ಶಾಲಿನಿ ರವರ ದೀಪ ಬೆಳಗಿಸಿ ಶಿಬಿರ ಉದ್ಘಾಟನೆಗೈದರು.ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರತೀ ಗ್ರಾಮದ ಬಡವರಿಗೂ ಪಂಚ ಗ್ಯಾರಂಟಿ ಯೋಜನೆಯ ಪ್ರಯೋಜನ ತಲುಪಬೇಕೆಂಬ ಅಶಯಕ್ಕೆ ಪೂರಕವಾಗಿ ಪ್ರತಿ ವಲಯದಲ್ಲಿ ಇದರ ಶಿಬಿರ ನಡೆಸಲಾಗುತ್ತಿದೆ ಎಂದರು.
ಮಾಜಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ತಾ.ಪಂ.ಮಾಜಿ ಉಪಾದ್ಯಕ್ಷರಾದ ಅಬ್ಬಾಸ್ ಆಲಿ,ಮಾಜಿ ಎಪಿಎಂಸಿ ಅಧ್ಯಕ್ಷರಾದ ಪದ್ಮನಾಭ ರೈ ಮಾತನಾಡಿದರು. ಗ್ರಾ.ಪಂ ಉಪಾದ್ಯಕ್ಷರಾದ ಯಾಕುಬ್, ಗ್ರಾ.ಪಂ ಸದಸ್ಯರಾದ ಚಂದ್ರಶೇಖರ್ ರೈ,ಅಶ್ರಫ್,ಅನ್ಸಾರ್,ಹಿತಾ ಶೆಟ್ಟಿ, ಮಹಾಲಕ್ಷ್ಮೀ,ಅನಿತಾ,ಸಂಧ್ಯಾ,ಬ್ಲಾಕ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ,ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯರಾದ ನಾರಾಯಣ ನಾಯ್ಕ,ಅಲೆಸ್ಟರ್,ಪ್ರಮುಖರಾದ ವಿಶ್ವಜೀತ್ ರೈ,ತಾಲೂಕು ಗ್ಯಾರಂಟಿ ಯೋಜನೆಗಳ ಸದಸ್ಯರಾದ ಐಡಾ ಸುರೇಶ್,ಕಾಂಚಾಲಕ್ಷಿ,ಅಬ್ದುಲ್ ಕರೀಂ,ಕೃಷ್ಣಪ್ಪ ಪೂಜಾರಿ, ವಿನಯ್ ಕುಮಾರ್ ಸಿಂಧ್ಯಾ,ಸಿರಾಜ್ ಮದಕ,ಹರ್ಷನ್ ಬಿ,ಚಂದ್ರಶೇಖರ್ ಆಚಾರ್ಯ,ಸತೀಶ್ ಕೆ,. ಉಪಸ್ಥರಿದ್ದರು..
ಬೋಳಂತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸ್ವಾಗತಿಸಿ,ವಂದಿಸಿದರು.ಸುಮಾರು 200 ಕ್ಕು ಅಧಿಕ ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥರಿದ್ದರು.