ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಪುದ್ದೋಟ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾದ 13.90 ಲಕ್ಷ ರೂ.ವೆಚ್ಚದ ನೂತನ ಕೊಠಡಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸಿದರು.


ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ ನಾಯಕ್ ಅಳಾಬೆ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಮ್ ಸಿ ಸ್ಥಾಪಕ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ದಾಸ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪುಷ್ಪಾ ಎಸ್ ಕಾಮತ್, ಪ್ರಭಾಕರ ಶೆಟ್ಟಿ ನಾಡಾಜೆ, ಪ್ರಮೀಳಾ, ಉಷಾ ಎಸ್ ಶೆಟ್ಟಿ, ಮೋಹನ್ ಪ್ರಭು, ಹಿರಿಯರಾದ ಗೋವಿಂದನಾಯಕ್ ಆಳಾಬೆ, ಪಂಚಾಯತ್ ನೂತನ ಸದಸ್ಯ ರಾಜೇಶ್ ನೂಜಿಪ್ಪಾಡಿ ಉಪಸ್ಥಿತರಿದ್ದರು. ಮೋಂತಿಮಾರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ದೇವಕಿ ಎಚ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪುದ್ದೋಟು ಶಾಲೆ ಮುಖ್ಯೋಪಾಧ್ಯಾಯರಾದ ಗಣೇಶ್ ಸ್ವಾಗತಿಸಿ, ಮೋಹನ್ ದಾಸ್ ಶೆಟ್ಟಿ ವಂದಿಸಿದರು. ರಮೇಶ್ ರಾವ್ ಪತ್ತುಮುಡಿ ಕಾರ್ಯಕ್ರಮ ನಿರೂಪಿಸಿದರು.
