ಬಂಟ್ವಾಳ: ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ನಿಧಿ ಕುಂಭ ಕಾರ‍್ಯಕ್ರಮ

ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 8 ರಂದು ಆದಿತ್ಯವಾರ ಬೆಳಿಗ್ಗೆ 10-05 ಘಂಟೆ ಮಕರ ಲಗ್ನದಲ್ಲಿ ಸುಮೂಹೂರ್ತದಲ್ಲಿ ದೇವಸ್ಥಾನದ ನೂತನ ಗರ್ಭಗುಡಿಯ ನಿಧಿ ಕುಂಭ ಕಾರ‍್ಯಕ್ರಮವು ನಡೆಯಲಿದೆ.
ಸದ್ರಿ ದೇವಸ್ಥಾನದ ತಂತ್ರಿಗಳಾದ ಶ್ರೀ ವಿಷ್ಣುಮೂರ್ತಿ ತಂತ್ರಿಗಳು, ಎಡಪದವು ಹಾಗೂ ದೇವಸ್ಥಾನದ ವಾಸ್ತುಶಿಲ್ಪಿ ಶ್ರೀ ಮಹೇಶ್ ಮುನಿಯಂಗಲ (ವಾಸ್ತುಶಿಲ್ಪ ಕನ್ಸಲ್ಲೆಂಟ್), ಶಿಲ್ಪಿ ಪಳನಿಸ್ವಾಮಿ ಕಟೀಲು ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ. ಬೆಳ್ಳಿ ಮತ್ತು ಬಂಗಾರದ ನಾಣ್ಯ ಗಳನ್ನು ಮಾತ್ರ ನಿಧಿ ಕುಂಭಕ್ಕೆ ಹಾಕಲಾಗುವುದು ಎಂದು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯೂ ತಿಳಿಸಿದೆ.