ಬಂಟ್ವಾಳ: ವಕೀಲರ ಸಂಘ (ರಿ), ಬಂಟ್ವಾಳ ಮತ್ತು ಅಧಿವಕ್ತಾ ಪರಿಷತ್ ಕರ್ನಾಟಕ – ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ಘಟಕ ಇವರ ಜಂಟಿ ಅಶ್ರಯದಲ್ಲಿ ಸಂವಿಧಾನ ಮತ್ತು ವಕೀಲರ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಗಾರವು ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ನಡೆಯಿತು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ ಅವರು ದೀಪ ಬೆಳಗಿಸಿ ಕಾರ್ಯಗಾರಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ ವಿಜಯ್ ಕುಮಾರ್ ಅವರು ಪ್ರೊಫೆಸನಲ್ ಏಥಿಕ್ಸ್ ನ ಕುರಿತು ಮಾಹಿತಿ ನೀಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ.ಏನ್, ಅಧಿವಕ್ತಾ ಪರಿಷತ್ ಬಂಟ್ವಾಳದ ಅಧ್ಯಕ್ಷೆ ಉಮಾ ಏನ್. ಸೋಮಯಾಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ ನ ಸಾಮಾಜಿಕ ಕಾರ್ಯದ ಪ್ರಯುಕ್ತ ವಕೀಲರ ದಿನಾಚರಣೆಯ ಅಂಗವಾಗಿ ಅರ್ಕುಳ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮಕ್ಕೆ 32 ಸಾವಿರ ರೂ. ಮೌಲ್ಯದ ಫ್ರಿಜ್ ನ್ನು ಸ್ಥಾಪಕರಾದ ಹರೀಶ್ ಪೆರ್ಗಡೆ ಯವರಿಗೆ ಹಸ್ತಾಂತರಿಸಲಾಯಿತು. ಇದರ ಜತೆಗೆ ಹಿರಿಯ ವಕೀಲರಾದ ಎಂ ಕೆ ವಿಜಯ್ ಕುಮಾರ್ ಅವರನ್ನು ವಕೀಲರ ಸಂಘ (ರಿ) ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬಂಟ್ವಾಳ ವಕೀಲರ ಸಂಘ (ರಿ) ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ.ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವ ನ್ಯಾಯವಾದಿ ಸ್ವರ್ಣ ಗೌರಿ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಧಿವಕ್ತಾ ಪರಿಷತ್ ನ ಸದಸ್ಯರಾದ ವೀರೇಂದ್ರ ಎಂ ಸಿದ್ದಕಟ್ಟೆ ವಂದಿಸಿದರು. ನಿತಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *