ಪೊಳಲಿ ಸೇತುವೆ ದುರಸ್ಥಿಗೆ 610 ಲಕ್ಷ ರೂ. ಅಂದಾಜು ಪಟ್ಟಿಗೆ ಸರ್ಕಾರ ಅನುಮೋದನೆ

ಪೊಳಲಿ: ಅಡ್ಡೂರು ಸೇತುವೆ ಬಿರುಕು ಬಿಟ್ಟದೆ ಎಂದು ಈ ಸೇತುವೆಯನ್ನು ಬಂದ್ ಮಾಡಲಾಗಿತ್ತು. ಈ ಬಗ್ಗೆ ತರತೂರಿಯಲ್ಲಿ ಜಿಲ್ಲಾಡಳಿತ ನಿರ್ಧಾರವನ್ನು ತೆಗೆದುಕೊಂಡು, ಯಾವುದೇ ಸೂಚನೆ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ ಬಂದು ಮಾಡಿದರು. ಇದರಿಂದ ದೊಡ್ಡ ವಿವಾದವು ಸೃಷ್ಟಿಯಾಗಿತ್ತು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಧಾರಣಾ ಸಾಮರ್ಥ್ಯ ಯಂತ್ರ ಬಂದು ಪರಿಶೀಲನೆ ಮಾಡಿ. ಅದರ ವರದಿಯನ್ನು ಬೆಂಗಳೂರಿಗೆ ಕಳಿಸಿತ್ತು. ಇದೀಗ ಈ ವರದಿಯೂ ಬಂದಿದ್ದು, ಶಿಥಿಲಗೊಂಡಿರುವ ಅಡ್ಡೂರು ಸೇತುವೆ ಯ ಧಾರಣಾ ಸಾಮರ್ಥ್ಯ ಹೆಚ್ಚಿಸಿ (ದುರಸ್ಥಿ) ಸೇತುವೆಯನ್ನು ಎಲ್ಲಾ ವಾಹನಗಳಿಗೆ ಸಂಚಾರ ಮುಕ್ತಗೊಳಿಸಲು ಸಲ್ಲಿಸಲಾಗಿದ್ದ 610 ಲಕ್ಷ ರೂ. ಅಂದಾಜು ಪಟ್ಟಿಗೆ ಸರ್ಕಾರದಿಂದ ಅನುಮೋದನೆ ದೊರಕಿದ್ದು. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆದು ದುರಸ್ಥಿ ಕಾಮಗಾರಿ ಚಾಲನೆಗೊಳ್ಳಲಿದೆ ಎಂದು ಹೇಳಲಾಗಿದೆ.