ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಟಿ ಮಹೋತ್ಸವ
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಟಿ ಮಹೋತ್ಸಹ ಶುಕ್ರವಾರದಂದು ನಡೆಯಿತು.
ಷಷ್ಠಿ ರಥೋತ್ಸವ ಬಲಿ ಉತ್ಸವದಲ್ಲಿ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ ರಾಮ್ ಭಟ್, ಪರಮೇಶ್ವರ ಭಟ್, ದೇವಳದ ತಂತ್ರಿ ಸುಬ್ರಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ, ಆಡಳಿತ ಮೊಕ್ತೇಸರ ಡಾ ಮಂಜಯ್ಯ ಶೆಟ್ಟಿ ಅಮ್ಮುoಜೆ ಗುತ್ತು, ಅನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಳಿಪಾಡಿಗುತ್ತು, ಉದಯ ಆಳ್ವ, ಕೃಷ್ಣಕುಮಾರ್ ಪೂಂಜ ಸೇರಿದಂತೆ ಸಾವಿರ ಸೀಮೆಯ ಭಕ್ತಾಧಿಗಳು ಭಾಗಿಯಾಗಿದ್ದರು.