ಬಜ್ಪೆ: ಬಜ್ಪೆ, ಮರವೂರು, ಗುರುಪುರ ವ್ಯಾಪ್ತಿಯಲ್ಲಿ ಕರೆಯಲಾಗಿದ್ದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂದರ್ಭ ಖಾಸಗಿ ಸಿಟಿ ಬಸ್, ಟೆಂಪೋ ಹಾಗೂ ರಾಜಹಂಸ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ಮುಂಜಾನೆ 9 ಗಂಟೆಯ ಸುಮಾರಿಗೆ ಸಂಭವಿಸಿದೆ. ಬಜ್ಪೆಯಲ್ಲಿ ನಿಲ್ಲಿಸಿದ್ದ ಬಸ್ ಗೆ ಕಲ್ಲುತೂರಾಟ ನಡೆಸಲಾಗಿದೆ.

ಬಜ್ಪೆಯಲ್ಲಿ `ಫಾತಿಮಾ’ ಹೆಸರಿನ ಖಾಸಗಿ ಬಸ್ಸಿನ ಗಾಜು ಪುಡಿಯಾಗಿದೆ. ಇನ್ನು ಟೆಂಪೋ ಹಾಗೂ ಬೆಂಗಳೂರಿನಿಂದ ಬರುತ್ತಿದ್ದ ರಾಜಹಂಸ ಬಸ್ಸಿಗೂ ಗುರುಪುರ, ಕೈಕಂಬ ಪರಿಸರದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಚಾಲಕನಿಗೆ ಏಟು ತಗಲಿದೆ.
ಸೋಮವಾರ ಮುಂಜಾನೆಯಿಂದಲೇ ಬಜ್ಪೆ, ಗುರುಪುರ, ಕೈಕಂಬ ಮತ್ತು ಆಯಕಟ್ಟಿನ ಜಾಗಗಳಲ್ಲಿ ಘರ್ಷಣೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಇದರ ನಡುವೆಯೂ ದುಷ್ಕರ್ಮಿಗಳು ಬಸ್ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸುವ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ.
ಕಂಕನಾಡಿ ಪೊಳಿಸರು ಅಲ್ಲಲ್ಲಿ ನಾಕಾಬಂಧಿ ಹಾಕಿದ್ದು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದರಂತೆ ಗುಂಪುಕಟ್ಟಿಕೊಂಡು ವಾಹನಗಳಲ್ಲಿ ತೆರಳುವುದು ನಿಷೇಧಿಸಲಾಗಿದೆ
