ಬಂಟ್ವಾಳ: ಕರಿಯಂಗಳ ನಿವಾಸಿ ಶತಾಯುಷಿ ಕಮಲಾ ಬಾಬು ಸಪಲ್ಯ ನಿಧನ

ಬಂಟ್ವಾಳ:ಪೊಳಲಿ ಸಮೀಪದ ಕರಿಯಂಗಳ ನಿವಾಸಿ ಶತಾಯುಷಿ ಕಮಲಾ ಬಾಬು ಸಪಲ್ಯ ನಿಧನ ಹೊಂದಿದ್ದಾರೆ. ಪ್ರಗತಿಪರ ಕೃಷಿಕ ದಿವಂಗತ ಬಾಬು ಸಪಲ್ಯ ಇವರ ಪತ್ನಿ ಶತಾಯುಷಿ ಕಮಲಾ ಬಾಬು ಸಪಲ್ಯ(104) ಅಸೌಖ್ಯದಿಂದ ಮಂಗಳವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರಿಗೆ ಪುತ್ರ ಮತ್ತು ನಾಲ್ವರು ಪುತ್ರಿಯರು ಇದ್ದಾರೆ. ಹೈನುಗಾರಿಕೆ ಮತ್ತು ಭತ್ತ ಬೇಸಾಯದಲ್ಲಿ ಪರಿಣತಿ ಹೊಂದಿದ್ದ ಇವರು ಮೂಡುಬಿದ್ರೆ ಶ್ರೀಯಾನ್ ಕುಟುಂಬದ ಹಿರಿಯ ಸಲಹೆಗಾರರಾಗಿದ್ದರು. ಮೃತ ಕಮಲಾ ಬಾಬು ಸಪಲ್ಯ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಬಡಕಬೈಲು ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.