ತಿಂಗಳ ಕಾರ್ತಿಕ ದೀಪೋತ್ಸವ ಸಂಪನ್ನ
ಬಂಟ್ವಾಳ: ಸಜೀಪ ಮಾಗಣೆಯ ಬಿಲ್ಲಂ ಪದವು ಶ್ರೀ ಕಾಳಾದ್ರಿ ಸಾನಿಧ್ಯ ಒಂದು ತಿಂಗಳ ಕಾರ್ತಿಕ ದೀಪೋತ್ಸವ ಸಂಪನ್ನ ಒಂದು ತಿಂಗಳ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡಿದೆ. ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ವೈಧಿಕ ವಿಧಿ ವಿಧಾನಗಳು,ಶ್ರೀದೇವರಿಗೆ ವಿಶೇಷ ಪೂಜೆಯು ನೆರವೇರಿತು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಭಂಡಾರಿ ಪುಣ್ಕೆಮಜಲು,ವೆಂಕಟೇಶ್ವರ ಭಟ್ ಮುಳ್ಳುಂಜ,ಗಣಪತಿ ಮಹಾಬಲೇಶ್ವರ ಭಟ್, ಈಶ್ವರ ಮಂಗಳ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಕೆ ರಾಧಾಕೃಷ್ಣ ಆಳ್ವ, ಪ್ರವೀಣ್ ಆಳ್ವ, ಪ್ರದೀಪ್ ಶೆಟ್ಟಿ,ಶಿವರಾಮ ಭಂಡಾರಿ, ಪ್ರದೀಪ್ ರೈ ಅಂಕದ ಕೋಡಿ, ಸೋಮನಾಥ ಭಂಡಾರಿ,ಸುಧಾಕರ ಕೆ.ಟಿ., ಪನೋಲಿಬೈಲು ಕ್ಷೇತ್ರದ ಆಡಳಿತ ಅಧಿಕಾರಿ ದಿವಾಕರ ಮುಗುಳಿಯ,ಕಿಶನ್ ಸೇನವ ಮೊದಲಾದವರು ಉಪಸ್ಥಿತರಿದ್ದರು .
ಇದೇ ವೇಳೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್,ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ದೇವಳದ ಅರ್ಚಕ ಗಣಪತಿ ಮಹಾಬಲೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.