ಬಂಟ್ವಾಳ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಬಾಲವಿಕಾಸ ಸಮಿತಿ, ಪೋಷಕರು, ಸ್ತ್ರೀಶಕ್ತಿ ಸಮಿತಿ ಆಶ್ರಯದಲ್ಲಿ ಬಾಳ್ತಿಲದ ಅಂಗನವಾಡಿ ಬಾಳ್ತಿಲ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ನ.25ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಅಧ್ಯಕ್ಷತೆಯನ್ನು ಕೇಂದ್ರದ ಪುಟಾಣಿ ಭವಿಷ್ ಬಿ. ವಹಿಸಿದ್ದರು. ಅತಿಥಿಗಳಾಗಿ ಜೇನು ಮತ್ತು ರಬ್ಬರ್ ವ್ಯವಸಾಯ ಸಹಕಾರ ಸಂಘದ ಉಪಾಧ್ಯಕ್ಷ ಮೋಹನ ಪಿ.ಎಸ್, ಬಾಲವಿಕಾಸ ಸಮಿತಿ ಅಧ್ಯಕ್ಷರಾಧ ಹೇಮಾವತಿ, ಪಂಚಾಯಿತಿ ಸದಸ್ಯರಾದ ಶಿವರಾಜ್ ಕಾಂದಿಲ, ಪೋಷಕರಾಧ ಇಬ್ರಾಹಿಂ ರಶೀದ್, ಉಮ್ಮರ್ ಫಾರೂಕ್, ಪೂರ್ಣಿಮಾ, ದಿವ್ಯಾ, ವೀಣಾ, ಸುಜಾತಾ, ಸಮಾಜ ಸೇವಕಿ ಪದ್ಮಿನಿ, ಸ್ತ್ರೀಶಕ್ತಿ ಸಂಘದ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ನೃತ್ಯ ಹಾಗೂ ಛದ್ಮವೇಷ ಸ್ಪರ್ಧೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಸುಂದರಿ ಕಾರ್ಯಕ್ರಮ ನಿರ್ವಹಿಸಿದರು. ಪೂರ್ಣಿಮಾ ವಂದಿಸಿದರು.

By suddi9

Leave a Reply

Your email address will not be published. Required fields are marked *