ಬಂಟ್ವಾಳ: ಹಿಂದೂ ಯುವ ಸೇನೆಯಿಂದ 19 ನೇ ರಕ್ತದಾನ ಶಿಬಿರ
ಬಂಟ್ವಾಳ: ಹಿಂದು ಯುವ ಸೇನೆ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ಮಂಗಳೂರು ಸಹಕಾರದೊಂದಿಗೆ 19ನೇ ರಕ್ತದಾನ ಶಿಬಿರ ಬಂಟ್ವಾಳದಲ್ಲಿ ನಡೆಯಿತು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಹಿಂದು ಯುವಸೇನೆ ಕೇಂದ್ರೀಯ ಮಂಡಳಿಯ ಅಧ್ಯಕ್ಷರಾದ ಯಶೋಧರ ಚೌಟ ಎಕ್ಕೂರು, ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಮುಖಂಡರಾದ ವಸಂತ್ ಕುಮಾರ್ ಮಣಿಹಳ್ಳ. ನಿಶಾಂತ್ ಮಂಗಳೂರು. ಅವಿನಾಶ್ ಕಾಮತ್. ಹರೀಶ್ ಕೋಟ್ಯಾನ್. ಪುಷ್ಪರಾಜ್ ಹರಿಪ್ರಸಾದ್. ರಾಮಚಂದ್ರ ಗೌಡ, ಎಜೆ ಆಸ್ಪತ್ರೆಯ ಸಿಬ್ಬಂದಿ ರೇಷ್ಮಾ ಗಾಣಿಗ ಉಪಸ್ಥಿತರಿದ್ದರು. ವಿ.ಪ.ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮತ್ತು ನಿಶಾಂತ್ ಮಂಗಳೂರು ಅವರನ್ನು ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ ಸ್ವಾಗತಿಸಿ ಧನ್ಯವಾದ ನೀಡಿದರು ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು