ನಂದಾವರ ಕ್ಷೇತ್ರದಲ್ಲಿ ಸಾಮೂಹಿಕ ಸೀಯಾಳಾಭಿಷೇಕ
ಬಂಟ್ವಾಳ: ಪಾಣೆಮಂಗಳೂರು ನಂದಾವರಶ್ರೀ ವಿನಾಯಕ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿಸಜೀಪ ಮಾಗಣೆಯ ವತಿಯಿಂದ ಪೂರ್ವ ಸಂಪ್ರದಾಯದಂತೆ ಸಾಮೂಹಿಕ ಸೀಯಾಳಾಭಿಷೇಕವು ಸೋಮವಾರ ಜರಗಿತು.

ಸಜೀಪ ಮಾಗಣೆತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಹೇಶ ಕುಮಾರ ಭಟ್ ಅವರ ಪೌರೋಹಿತ್ಯದಲ್ಲಿ ಸೀಯಾಳಾಭಿಷೇಕ ನೆರವೇರಿತು.
ಮಾಡದಾರಗುತ್ತು ಗಡಿ ಪ್ರಧಾನರಾದ ನಾರಾಯಣ ಆಳ್ವ ಯಾನೆ ಶಶಿಧರರೈ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಗಡಿ ಪ್ರಧಾನರಾದ ಆಳ್ವರಪಾಲು ಗುತ್ತು ಗಂಗಾಧರ ಭಂಡಾರಿ, ನಗ್ರಿಗುತ್ತು ಜಯಶೆಟ್ಟಿ, ಶಂಕರ ಪೂಜಾರಿ ಯಾನೆ ಕೊಚ್ ಪೂಜಾರಿ, ಕುಂಜ್ಞಪೂಜಾರಿ ಯಾನೆ ದಯಾನಂದ ಪೂಜಾರಿ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಮೋಹನದಾಸ್ ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯ ದಾಮೋದರ ಬಿಎಂ. ಹಾಗೂ ಮಾಗಣೆಯ ಗುತ್ತುಮನೆ ತನದವರು ಉಪಸ್ಥಿತರಿದ್ದರು.