ಕುದ್ರೆಬೆಟ್ಟುವಿನಲ್ಲಿ ಹಗ್ಗ- ಜಗ್ಗಾಟ ಪಂದ್ಯಾಟ
ಬಂಟ್ವಾಳ : ದೈಹಿಕ ವ್ಯಾಯಾಮಗಳು ಮತ್ತು ದೈಹಿಕ ಕಸರತ್ತುಗಳು ನಮ್ಮ ದೇಹದ ಬೆಳವಣಿಗೆಗೆ ಪ್ರಮುಖ ಪಾತ್ರವಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ದೈಹಿಕ ಚಟುವಟಿಕೆಗಳು ಕ್ಷೀಣಿಸುತ್ತಾ ವಿವಿಧ ರೀತಿಯ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ, ಉತ್ತಮ ಆರೋಗ್ಯವನ್ನು ಪಡೆಯಲು ಕ್ರೀಡಾಕೂಟಗಳು,ದೈಹಿಕ ಚಟುವಟಿಕೆಗಳು ಉತ್ತಮವಾದ ಫಲಿತಾಂಶವನ್ನು ನೀಡುತ್ತದೆ ಎಂದು ಕುದ್ರೆಬೆಟ್ಟು ಜನಶಕ್ತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಿನ್ನಪ್ಪ ಮಾಸ್ಟರ್ ಏಲ್ತಿಮಾರ್ ಹೇಳಿದರು,

ಶ್ರೀ ಮಣಿಕಂಠ ಯುವಶಕ್ತಿ (ರಿ.)ಕುದ್ರೆಬೆಟ್ಟು, ಹಿರಿಯ ವಿದ್ಯಾರ್ಥಿ ಸಂಘ ಕುದ್ರೆಬೆಟ್ಟು ಇದರ ಜಂಟಿ ಆಶ್ರಯದಲ್ಲಿ ಕುದ್ರಬೆಟ್ಟು ಶ್ರೀ ಮಣಿಕಂಠ ಭಜನಾ ಮಂದಿರದ ವಠಾರದಲ್ಲಿ ಜರಗಿದ ಸ್ಥಳೀಯ 8 ತಂಡಗಳ ಗ್ರೀಪ್ ಮಾದರಿಯ ಹಗ್ಗ ಜಗ್ಗಾಟ ಪಂದ್ಯಾಟ ಮಣಿಕಂಠ ಟ್ರೋಫಿ 2024 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಮಣಿಕಂಠ ಯುವಶಕ್ತಿ ಘಟಕದ ಅಧ್ಯಕ್ಷರಾದ ಲೋಕಾನಂದ ಏಲ್ತಿಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು, ಜನಶಕ್ತಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಧರ್ಮದ ಬಲ್ಲಿ, ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ಕೇಶವ ಏಳ್ತೀಮಾರ್, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಶಿವರಾಜ್ ,ಕಾರ್ಯದರ್ಶಿ ನೀತು ಅಮೀನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲಿಯಾನ್, ಟ್ರಸ್ಟಿಗಳಾದ ರವಿ ಸುವರ್ಣ ಬೈಲು,ಶಂಕರ ಕುದ್ರೆಬೆಟ್ಟು , ಉದ್ಯಮಿ ಗಣೇಶ್ ಜನನಿ ,ಹಿರಿಯರಾದ ಕೃಷ್ಣಪ್ಪ ಪೂಜಾರಿ ಬೊಲ್ಪೊಡಿ , ಶೇಖರ ಶಾಲಿಯನ್, ಜನಾರ್ಧನ ಸಾಲಿಯಾನ್, ಅನ್ನು ಪೂಜಾರಿ ಏಳ್ತಿಮಾರ್,ಮಾಜಿ ಅಧ್ಯಕ್ಷರಾದ ಮಾದವ ಸಾಲಿಯಾನ, ಸನತ್ ಕುಮಾರ್, ಉಪಾಧ್ಯಕ್ಷರಾದ ಸತೀಶ್, ತೀರ್ಪುಗಾರರಾದ ನಾಗೇಶ್ ಪೊನ್ನಡಿ , ಜಯಕರ ಕಾಂಚನ್, ಸಂಘಟಕ ಹೇಮಂತ್ ಕುಮಾರ್ ಬೋಲ್ಪೊಡಿ ಉಪಸ್ಥಿತರಿದ್ದರು.
ಇದೇ ವೇಳೆ ಅಂಚೆ ಕಚೇರಿಯ ಜನಸಂಪರ್ಕ ರಕ್ಷಣಾ ಜೀವವಿಮೆ ನೊಂದಾವಣೆ ಶಿಬಿರವು ನಡೆಯಿತು. 46 ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು.
ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ರಕ್ತೇಶ್ವರಿ ಸುಧೆಕಾರು, ದ್ವಿತೀಯ ಸ್ಥಾನ ವನ್ನು ಕುರ್ಮಾನ್ ಯಂಗ್ ಬಾಯ್ಸ್, ತೃತೀಯ ಸ್ಥಾನವನ್ನು ಕುದ್ರೆಬೆಟ್ಟು , ಚತುರ್ಥ ಗೋಳ್ತಮಜಲು ಪಡೆದುಕೊಂಡಿತು.
ಜನಶಕ್ತಿ ಸೇವಾ ಟ್ರಸ್ಟ್ ಕೋಶಾಧಿಕಾರಿ ಭೋಜರಾಜ ಸ್ವಾಗತಿಸಿ, ಸಂತೋಷ್ ಕುಮಾರ್ ಬೊಲ್ಪೊಡಿ ವಂದಿಸಿದರು. ಯೋಗೇಶ್ ತೋಟ ಕಾರ್ಯಕ್ರಮ ನಿರೂಪಿಸಿದರು.