‘ಕ್ವೆನ್ಜಾ’ ಅಂತರ್ ತರಗತಿ ರಸಪ್ರಶ್ನೆ ಸ್ಪರ್ಧಾಕಾರ್ಯಕ್ರಮ
ಬಂಟ್ವಾಳ : ಬಂಟ್ವಾಳ ಶ್ರೀ ವೆಂಕಟರಮಣಸ್ವಾಮೀ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಕಲಾವಿಭಾಗದ ವಿದ್ಯಾರ್ಥಿಗಳಿಗೆ ‘ಕ್ವೆನ್ಜಾ’ ಅಂತರ್ ತರಗತಿ ರಸಪ್ರಶ್ನೆ ಸ್ಪರ್ಧಾಕಾರ್ಯಕ್ರಮವು ನಡೆಯಿತು.

ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಆಡಳಿತಾತ್ಮಕ ಪ್ರಾಂಶುಪಾಲರಾದ ಡಾ| ಸುಯೋಗ ವರ್ಧನ್ ಡಿ.ಎಮ್ ಮಾತನಾಡಿ ಇಂತಹ ಸ್ಪರ್ಧೆಗಳು ಬದುಕಿಗೆ ಪೂರಕವಾಗಿವೆ. ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ಮಾತನಾಡಿ ಜ್ಞಾನಭಿವೃದ್ಧಿಗೆ ಇಂತಹ ಸ್ಪರ್ಧೆಗಳು ಸಹಕಾರಿ ಎಂದರು.
ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕ ಡಾ| ಕಾಶೀನಾಥ್ ಶಾಸ್ತ್ರೀ ಹೆಚ್.ವಿ, ಮಾನವಿಕ ಸಂಘದ ಅಧ್ಯಕ್ಷ ಶಿವಣ್ಣ ಪ್ರಭು.ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ರೂಪಾ ಸ್ವಾಗತಿಸಿದರು. ಮಾನವಿಕ ಸಂಘದ ಸಲಹೆಗಾರ ಗೀತಾ ಯು ವಂದಿಸಿದರು. ಉಪನ್ಯಾಸಕ ಸುನಿಲ್ ಅರ್ಜುನ್ ಚಿಕ್ಕುಮ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಮನೋಹರ್ ಎಸ್ ದೊಡ್ಡಮಣಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶಶಿಧರ್ ಎಸ್. ಸಹಕರಿಸಿದರು.