ಶಿಗ್ಗಾಂವಿಯಲ್ಲಿ ಮಾಜಿ ಸಚಿವ ರಮಾನಾಥ ರೈ ಮತಬೇಟೆ
ಬಂಟ್ವಾಳ: ರಾಜ್ಯದಲ್ಲಿ ಮೂರು ಉಪಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳಿಂದ ಪ್ರಚಾರದ ಅಬ್ಬರ ಜೋರಾಗಿದ್ದು,ಕೆಪಿಸಿಸಿಯಿಂದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಉಸ್ತುವಾರಿ ವಹಿಸಿರುವ ಮಾಜಿ ಸಚಿವ,ಕೆಪಿಸಿಸಿ ಉಪಾಧ್ಯಕ್ಷರಾದ ರಮಾನಾಥ ರೈ ರವರು ಗುರುವಾರ ಶಿಗ್ಗಾಂವಿ ಕ್ಷೇತ್ರದ ವಿವಿದೆಡೆಯಲ್ಲಿ ಮತಬೇಟೆ ನಡೆಸಿದರು.
ಶಿಗ್ಗಾಂವಿ ಕ್ಷೇತ್ರದ ಕೋಣನಕೇರಿಗ್ರಾಮದಲ್ಲಿ ಮನೆ,ಮನೆ ಭೇಟಿ ಸಹಿತ ಮತದಾರರನ್ನು ಖುದ್ದು ಭೇಟಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ಪಠಾಣ ಯಾಸೀರ ಅಹ್ಮದ ಖಾನ್ ರವರ ಪರವಾಗಿ ಮತಯಾಚನೆಗೈದರು.
ಅದೇರೀತಿ ಶಿಗ್ಗಾಂವಿ-ಸವಣೂರಿನಲ್ಲಿ ನಡೆದಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಪಕ್ಷದ ಮುಖಂಡರೊಂದಿಗೆ ಪಕ್ಷದ ಬಹಿರಂಗ ಸಭೆಯಲ್ಲಿಯು ಮಾಜಿ ಸಚಿವ ರಮಾನಾಥ ರೈ ಅವರು ಭಾಗವಹಿಸಿ
ಕಾಂಗ್ರೆಸ್ ಅಭ್ಯರ್ಥಿಯಾದ ಯಾಸಿರ್ ಖಾನ್ ಪಠಾಣ್ ಪರ ಮತಯಾಚನೆಗೈದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಇವರೊಂದಿಗಿದ್ದರು.