ಸಜಿಪ: ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳು ಕ್ಷೇತ್ರದಲ್ಲಿ 1 ಕೋಟಿ ರೂ. ವೆಚ್ಚದ ಗೋಪುರಕ್ಕೆ ಶಿಲಾನ್ಯಾಸ
ಬಂಟ್ವಾಳ: ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಜೀಪಮೂಡಗ್ರಾಮದ ಮಿತ್ತಮಜಲು ಶ್ರೀ ನಡಿಯೇ ಏಳು ಶ್ರೀಉಳ್ಳಾಲ್ತಿ ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳು ಕ್ಷೇತ್ರದಲ್ಲಿ ಸುಮಾರು ಒಂದೂವರೆ ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಗೋಪುರಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಯಿತು.
ಭೂಮಿ ಪೂಜೆಯ ಧಾರ್ಮಿಕ ವಿಧಿ,ವಿಧಾನ ಬುಧವಾರದಂದು ನೆರವೇರಿತು. ಗಡಿ ಪ್ರಧಾನರಾದ ಗಣೇಶ ನಾಯಕ ಯಾನೆ ಉಗ್ಗ ಶೆಟ್ಟಿ,ಬಿ.ಶಿವರಾಮ ಭಂಡಾರಿ,ಜಯರಾಮ ಶೆಟ್ಟಿ, ಯಶೋಧರರೈ ಎಂ.,ಎಸ್. ಶ್ರೀಕಾಂತ್ ಶೆಟ್ಟಿ, ಶ್ರೀನಿವಾಸ ಭಟ್ ನಗ್ರಿ, ಜಯಶಂಕರ ಬಾಸ್ರೀತ್ತಾಯ, ಮಹಾಬಲ ಕೊಟ್ಟಾರಿ, ದೇವಿಪ್ರಸಾದ್ ಪೂಂಜ,ಕೆ ಸದಾನಂದ ಶೆಟ್ಟಿ,ಕೆ.ರಾಧಾಕೃಷ್ಣ ಆಳ್ವ,ಜೀವನ್ ಆಳ್ವ, ವಿವೇಕ್ ಶೆಟ್ಟಿ ನಗ್ರಿಗುತ್ತು, ಹರೀಶ್ ರೈ,ಅರುಣ್ ಆಳ್ವ, ವಸಂತ ಶೆಟ್ಟಿ, ದಾಮೋದರ ಶೆಟ್ಟಿ, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಜ್ಞಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.