ಬಂಟ್ವಾಳ: ಲಯನ್ಸ್ ಕ್ಲಬ್ ಕೊಳ್ನಾಡು- ಸಾಲೆತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ
ಬಂಟ್ವಾಳ:ಲಯನ್ಸ್ ಕ್ಲಬ್ ಕೊಳ್ನಾಡು- ಸಾಲೆತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಕಾರ್ಯಕ್ರಮ ಆಚರಣೆ ಮಾಡಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಧಾರ್ಮಿಕ, ಸಾಮಾಜಿಕ ಮುಂದಾಳು ಪುಷ್ಪರಾಜ ಕುಕ್ಕಾಜೆ ಅವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೀಪಾವಳಿ ಆಚರಣೆಯಂತಹ ಹಬ್ಬ ಹರಿದಿನಗಳನ್ನು ನಿರಂತರವಾಗಿ ಸಂಪ್ರದಾಯಬದ್ದವಾಗಿ ಆಚರಿಸಿಕೊಂಡು ಬಂದಾಗ ನಮ್ಮ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಯನ್ ಬಾಲಕೃಷ್ಣ ಶೆಟ್ಟಿ ಖಂಡಿಗ ಮಾತನಾಡಿ ಇತರ ಭಾಷೆಗಳನ್ನು ಗೌರವಿಸುವುದರೊಂದಿಗೆ ನಮ್ಮ ಕನ್ನಡ ಭಾಷೆಯ ಬಗ್ಗೆಯು ನಮಗೆ ಅಭಿಯಾನ ಹೆಮ್ಮೆ ಬೇಕು ಎಂದು ಹೇಳಿದರು.
ಇದರ ಜತೆಗೆ ಲಯನ್ಸ್ ಕ್ಲಬ್ಬಿನಲ್ಲಿ ಗೋಪೂಜೆ, ತುಳಸೀ ಪೂಜೆ, ಬಲೀಂದ್ರ ಪೂಜೆಗಳನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು. ಮಹಿಳಾ ಸದಸ್ಯರು ಕನ್ನಡ ನಾಡಗೀತೆಯೊಂದಿಗೆ ವಿವಿಧ ಕನ್ನಡ ಗೀತೆಗಳನ್ನು ಹಾಡಿದರು. ಸೇವಾ ಚಟುವಟಿಕೆಯಾಗಿ ಕುಟುಂಬವೊಂದರ ಸದಸ್ಯರಿಗೆ ಹೊಸಬಟ್ಟೆಗಳನ್ನು ವಿತರಿಸಲಾಯಿತು ಹಾಗು ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ. ರಾಮಣ್ಣ ಶೆಟ್ಟಿ ವಹಿಸಿದ್ದರು. ಸ್ಥಾಪಕ ಸದಸ್ಯರಾದ ಲ. ವಿಠಲ ಕುಮಾರ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಲ. ರಮಾ ಜಿ ಆಚಾರ್, ಕೋಶಾಧಿಕಾರಿ ಲ. ಚಿತ್ತರಂಜನ್ ಕರೈ ಉಪಸ್ಥಿತರಿದ್ದರು. ಲ. ಜಯಪ್ರಕಾಶ ರೈ ಸ್ವಾಗತಿಸಿ, ರಾಮಪ್ರಸಾದ್ ರೈ ತಿರುವಾಜೆ ವಂದಿಸಿದರು.ಲ. ರಮಾನಂದ ನೂಜಿಪ್ಪಾಡಿಯವರು ಕಾರ್ಯಕ್ರಮ ನಿರ್ವಹಿಸಿದರು.