ಬಂಟ್ವಾಳ: ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಟೆಂಪೋ ಹಿಮ್ಮುಖವಾಗಿ ಚಲಿಸಿ ಆಟವಾಡುತ್ತಿದ್ದ ಮೂರೂವರೆ ವರ್ಷದ ಮಗುವಿನ ಮೇಲೆ ಹರಿದು ಮಗು ಮೃತಪಟ್ಟಿರುವ ಘಟನೆ ಬಂಟ್ವಾಳಕ್ಕೆ ಸಮೀಪದ ಲೊರೆಟ್ಟೊಪದವು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.

ಫರಂಗಿಪೇಟೆಯ ಮರ್ಹೂಮ್ ಉನೈಸ್ ಎಂಬವರ ಮೂರವರೆ ವರ್ಷದ ಪುತ್ರಿ ಆಶಿಕಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಲೊರೆಟ್ಟೊ ಪದವಿನ ಟಿಪ್ಪುನಗರದಲ್ಲಿರುವ ಅಜ್ಜಿ ಮನೆಗೆ ಬಂದಿದ್ದು, ಮಗು ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ‌ ಮನೆಯ ವರಾಂಡದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ಹಿಮ್ಮುಖವಾಗಿ ಚಲಿಸಿದ್ದು,ಈ ಸಂದರ್ಭ ಅಲ್ಲಿ ಆಟವಾಡಿತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದಿದೆ‌ ಎಂದು‌ ತಿಳಿದು ಬಂದಿದೆ.

ಗಂಭೀರಗಾಯಗೊಂಡಿದ್ದ ಮಗುವನ್ನು‌ ಬಂಟ್ವಾಳ ಸರಕಾರಿ‌ ಆಸ್ಪತ್ರೆಗೆ‌ ದಾಖಲಿಸಲಾಯಿತಾದರೂ ಆಗಲೇ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು‌ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *