ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ದೇವಾಸ್ಥಾನದಲ್ಲಿ ಲಕ್ಷ ಕುಂಕುಮಾರ್ಚನೆ ಸೇವೆ
ಪೊಳಲಿಯ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಕೂಟ ಮಹಾ ಜಗತ್ತು (ರಿ) ಅಂಗ ಸಂಸ್ಥೆ ಇವರ ವತಿಯಿಂದ ಸೇವಾರ್ಥವಾಗಿ ಶ್ರೀ ಕ್ಷೇತ್ರದ ಅರ್ಚಕ ವೃಂದದವರ ಸಹಕಾರದಿಂದ ಶ್ರೀ ದೇವಿಗೆ ಲಕ್ಷ ಕುಂಕುಮಾರ್ಚನೆ ಸೇವೆಯೂ ನವೆಂಬರ್ 15 ರಂದು ಶುಕ್ರವಾರದಂದು ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ಜರುಗಲಿದೆ.
ಈ ಲಕ್ಷ ಕುಂಕುಮಾರ್ಚನೆ ಸೇವೆಯಲ್ಲಿ ಭಕ್ತಾಧಿಗಳು ಭಾಗವಹಿಸಿ, ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಮುಖ್ಯ ಅರ್ಚಕರುಗಳು, ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.