ಬಂಟ್ವಾಳ: ಧರ್ಮಸ್ಥಳ ಸಂಘದಿಂದ ವಗ್ಗದ ಜನರಿಗೆ ಸ್ವ-ಉದ್ಯೋಗ ಪ್ರೇರಣ ಶಿಬಿರ
ವಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ವತಿಯಿಂದ ವಾಮದಪದವು ಅಂಬೇಡ್ಕರ್ ಭವನದಲ್ಲಿ ಬಂಟ್ವಾಳ ತಾಲೂಕಿನ ವಗ್ಗ ವಲಯದ ಪ್ರೇರಣ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವ- ಉದ್ಯೋಗ ಪ್ರೇರಣ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷರಾದ ಅನಿತಾ ಪ್ರಭು ವಹಿಸಿದ್ದರು .
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ರುಡ್ ಸೆಟ್ ಸಂಸ್ಥೆಯ ಕರುಣಾಕರ ಜೈನ್ ಆಗಮಿಸಿ, ಯಾವ ರೀತಿಯ ಸ್ವ-ಉದ್ಯೋಗ ಮನೆಯಲ್ಲಿದ್ದು ಮಾಡಿಕೊಂಡು ಹೇಗೆ ಲಾಭ ಪಡೆಯ ಬಹುದು ಹಾಗೂ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಜನಜಾಗೃತಿ ಸದಸ್ಯರು ನವೀನ್ ಚಂದ್ರ ಶೆಟ್ಟಿ ,ಪಂಚಾಯತ್ ಸದಸ್ಯೆ ಸುನಂದಾ, ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಕೇಂದ್ರದ ಸಯೋಜಕಿ ಗುಣವತಿ ಸ್ವಾಗತಿಸಿ,ವಲಯ ಮೇಲ್ವಿಚಾರಕಿ ಸವಿತಾ ವಂದಿಸಿದರು, ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.