Published On: Wed, Nov 6th, 2024

ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘದ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಧನಲಕ್ಷ್ಮೀ ಪೂಜೆ

ಬಂಟ್ವಾಳ: ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ ( ರಿ.) ದ. ಕ.ಜಿಲ್ಲೆ  ಇದರ ವತಿಯಿಂದ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಧನಲಕ್ಷ್ಮೀ ಪೂಜೆಯು ಬಿ.ಸಿ.ರೋಡ್ ನ ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಈ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀಧಾಮ ಮಾಣಿಲದ ಶ್ರೀಮೋಹನ ದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನಗೈದರು.
ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಬಿಜೆಪಿ ಜಿಲ್ಲಾಧ್ಯಕ್ಷರಾದ  ಸತೀಶ್ ಕುಂಪಲ,ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್,  ವಿ.ಹಿ.ಪ. ಜಿಲ್ಲಾಧ್ಯಕ್ಷರಾದ  ಪುರುಷೋತ್ತಮ ಮೊಗರ್ನಾಡ್, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜನಾರ್ದನ ಭಟ್  ಮಂಗಳೂರು,ವಿ.ಹಿ.ಪ.ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಸಾಮಾಜಿಕ ಕಾರ್ಯಕರ್ತ,  ಹೋರಾಟಗಾರ ಪುನೀತ್ ಕೆರೇಹಳ್ಳಿ ಬಜರಂಗದಳ  ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ದೇಲ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಸಾಮಾಜಿಕ ಕಾರ್ಯಕರ್ತ, ಕಲಾವಿದ ಬಿ.ಆರ್ .ಕಬಕ ಅವರನ್ನು ಸನ್ಮಾನಿಸಲಾಯಿತು.
ಶ್ರೀ ದುರ್ಗಾ ಫ್ರೆಂಡ್ಸ್ ಕರೆಂಕಿ ಇದರ ಸಾಧನೆಯನ್ನು ಗುರುತಿಸಿ ಇದರ ಅಧ್ಯಕ್ಷರು, ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು ಅನಾರೋಗ್ಯದಿಂದ ಬಳಲುತ್ತಿದ್ದ  ಕಿಶೋರ್ ರಾವ್ ಮೂಡಬಿದ್ರೆ ಅವರಿಗೆ ಸಹಾಯಧನ‌ ವಿತರಿಸಲಾಯಿತು.
ಉದ್ಯಮಿ ಸಂದೇಶ ಶೆಟ್ಟಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ನಾಗೇಂದ್ರ ಕುಮಾರ್,  ಬಂಟ್ವಾಳ ತಾ. ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ  ಮಾಧವ ಮಾವೆ,ಬಜರಂಗದಳದ  ಮಂಗಳೂರು ಜಿಲ್ಲಾ ಪ್ರಮುಖರಾದ ಪುನೀತ್ ಅತ್ತಾವರ, ಶ್ರೀಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಸೌಮ್ಯ ಮಾತಾಜೀ, ಹಿಂದೂ ನಾಯಕಿ ಸೌಮ್ಯ ಬೆಂಜನಪದವು, ಹಿ. ಜಾ. ವೇ.ಯ ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ,  ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ,  ರೈತ ಮೋರ್ಚಾ ಉಪಾಧ್ಯಕ್ಷ ಬೈದರಡ್ಕ ಪ್ರಭಾಕರ ಶೆಟ್ಟಿ,ಗೌರವಾಧ್ಯಕ್ಷರಾದ ರವೀಂದ್ರ ದಾಸ್, ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಾಣೇಶ್ ರಾವ್  ಮಂಗಳೂರು ಉಪಸ್ಥಿತರಿದ್ದರು
ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಜಯರಾಮ ಶೆಟ್ಟಿಗಾರ್ ಪ್ರಸ್ತಾವನೆಗೈದರು.ಬಿಜೆಪಿಯ  ಜಿಲ್ಲಾ  ಕಾರ್ಯದರ್ಶಿ ದಿನೇಶ್ ಆಮ್ಟೂರು ಸ್ವಾಗತಿಸಿದರು.
ಉದಯ ಕೆಲಿಂಜ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕು ಮೊದಲು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆಯನ್ನು ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುಪತಿ ಭಟ್  ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
  ವಸಂತ ತಂತ್ರಿ ಪಣಿಕಲ,ಲೋಕೇಶ್ ಭಟ್ ಅಲ್ಲಿಪಾದೆ ಅವರ ಪೌರೋಹಿತ್ಯದಲ್ಲಿ   ಸಾರ್ವಜನಿಕ  ಧನಲಕ್ಷ್ಮಿ ಪೂಜೆ ನೆರವೇರಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter