Published On: Tue, Nov 5th, 2024

ಸುಜೀರ್​​ ಶ್ರೀ ದೇವಕಿಕೃಷ್ಣ ರವಳನಾಥ ದೇವಾಲಯ ಕಳ್ಳತನ, 2 ಕೆ.ಜಿ. ಬೆಳ್ಳಿ , 3 ಪವನ್ ಚಿನ್ನ, ಹುಂಡಿ ಹಣ ದೋಚಿದ ಕಳ್ಳರು

ಬಂಟ್ವಾಳ: ಫರಂಗಿಪೇಟೆ ಸಮೀಪದ ಸುಜೀರ್​​​ನ ಶ್ರೀ ದೇವಕಿಕೃಷ್ಣ ರವಳನಾಥ ದೇವಾಲಯದಲ್ಲಿ ಕಳ್ಳತನವಾಗಿದೆ. ದೇಗುಲದ ಹಿಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿರುವ ಕಳ್ಳರ ತಂಡವೊಂದು ಲಕ್ಷಾಂತರ ರೂ.ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತು,ನಗದನ್ನು ದೋಚಿ ಪರಾರಿಯಾಗಿದ್ದು, ಕಳ್ಳತನ ಮಾಡಿರುವ ಬಗ್ಗೆ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಜೀರ್ ಕಾರ್ ಕುಟುಂಬಕ್ಕೆ ಸೇರಿದ ಈ ದೇವಳಕ್ಕೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಸೋಮವಾರ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ದೇವಳದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಅನಾದಿ ಕಾಲದಲ್ಲಿ ಹಿರಿಯರು ಕಾಪಾಡಿಕೊಂಡು ಬಂದಿರುವ ಸುಮಾರು ಒಂದೂವರೆ ಕೆ.ಜಿ‌.ತೂಕದ ಬೆಳ್ಳಿಯ ದೇವರ ಪೀಠ,ಚಿನ್ನದ ದೇವರ ಮೂಗುತಿ, ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ , 3 ಪವನ್ ಚಿನ್ನ ಮತ್ತು ಹುಂಡಿಯಿಂದ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಭಾನುವಾರ ಶ್ರೀ ದೇವಕಿಕೃಷ್ಣ ರವಳನಾಥ ದೇವಳದಲ್ಲಿ ವಿಶೇಷವಾದ “ಶ್ರೀನಿವಾಸ ಕಲ್ಯಾಣ” ಪೂಜಾ ಕಾರ್ಯಕ್ರಮವಿದ್ದು, ಭಕ್ತರು ಇಲ್ಲಿದೆ ಹುಂಡಿಗೆ ಹತ್ತು ಸಾವಿರಕ್ಕೂ ಅಧಿಕ ಹಣ ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ಕಾರ್ಯಕ್ರಮದ ಮುಗಿದ ನಂತರ ಅರ್ಚಕರು ಸೇರಿದಂತೆ ದೇವಾಲಯದ ಬಾಗಿಲು ಮುಚ್ಚಿ ಹೋಗಿದ್ದಾರೆ.

ಇನ್ನು ಈ ಕೃತ್ಯದಲ್ಲಿ 6 ಜನ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಇವರ ಕೈಚಳಕ ನೋಡಿದ್ದರೆ, ಇವರು ಅನೇಕ ವರ್ಷಗಳಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸಿಸಿಟಿವಿ ದೃಶ್ಯ ನೋಡಿದ್ರೆ ಇದು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಾವುದೇ ಅಂಜಿಕೆಯಿಲ್ಲದೆ ಮಾಡಿರುವ ಕೃತ್ಯ ಎಂದು ಹೇಳಲಾಗಿದೆ.

ಇನ್ನು ಕಳ್ಳತಕ್ಕೆ ಬಂದ ವಾಹನದಲ್ಲೇ ದೇವಾಲಯದ ವಸ್ತುಗಳನ್ನು ಸಾಗಿಸಿದ್ದಾರೆ ಎಂದು ಹೇಳಲಾಗಿದೆ. ಮುಂಜಾನೆ ಸುಮಾರು 3.30 ರ ಹೊತ್ತಿಗೆ ದೇವಸ್ಥಾನಕ್ಕೆ ಮುಸುಕುಧಾರಿಗಳಾಗಿ ಬಂದಿದ್ದ ಕಳ್ಳರ ಪೈಕಿ ಮೂವರು ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ್ದಾರೆ.ಇನ್ನುಳಿದ ಮೂವರು ದೇವಸ್ಥಾನದ ಸುತ್ತಲೂ ತಿರುಗಾಡಿದ್ದಾರೆ,ಇಬ್ಬರು ಗರ್ಭಗುಡಿಯ ಒಳಗೆ ಪ್ರವೇಶಿಸಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬರುತ್ತಾರೆ.ಗೋಪುರದಲ್ಲಿ ಕಳ್ಳತನ ಮಾಡಿದ ಎಲ್ಲಾ ವಸ್ತುಗಳನ್ನು ಒಂದೇ ಚೀಲದಲ್ಲಿ ತುಂಬಿಸಿ ವಾಪಸು ಹೋಗಿದ್ದಾರೆ.

ಇದರ ಜತೆಗೆ ಕಳ್ಳರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುವುದು ಕೂಡ ಕಂಡು ಬಂದಿದೆ. ಕೃತ್ಯದ ಬಳಿಕ 4 ಗಂಟೆಯ ಅಂದಾಜಿಗೆ ದೇವಳದಿಂದ ಹೊರಗೆ ತೆರಳಿದ್ದಾರೆ.ದೇವಳದ ಕಂಪೌಂಡ್ ಒಳಗಯೇ ಅರ್ಚಕರ ಮನೆಯಿದೆ. ಆದರೆ ಈ ಬಗ್ಗೆ ಅವರಿಗೆ ಗೊತ್ತಿಲ್ಲ. ಕಳ್ಳರು ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಅರ್ಚಕರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲಾರಂಭಿಸಿದೆ. ಆಗ ಎಚ್ಚರಗೊಂಡ ಅರ್ಚಕರು,ಸುತ್ತಮುತ್ತ ನೋಡಿದ್ದಾರೆ.ತಕ್ಷಣ ಸಿ.ಸಿ.ಕ್ಯಾಮರಾವನ್ನು ಪರಿಶೀಲಿಸಿದಾಗ ದೇವಳದೊಳಗೆ ಮೂವರು ಕಂಡುಬಂದಿದ್ದಾರೆ. ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ಮಾಹಿತಿ ನೀಡಿದ್ದಾರೆ.ದೇವಳದ ಹೊರಗಡೆ ಮೂವರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ನಿಂತಿದ್ದು, ಮೂವರು ದೇವಸ್ಥಾನದ ಒಳಗೆ ಇದ್ದು,ನನಗೆ ಒಬ್ಬನಿಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ. ಕೂಡಲೇ ಮೆನೇಜರ್ ದೇವಳಕ್ಕೆ ಬಂದಿದ್ದಾರೆ ಆದರೆ, ಅಷ್ಟೊತ್ತಿಗೆ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ಇನ್ನು ಈ ಕಳ್ಳತದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ. ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚುತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ.ಕಳವಾದ ಒಟ್ಟು ವಸ್ತುಗಳ ಮೌಲ್ಯ 2.30 ಲಕ್ಷ ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಬಂಟ್ಚಾಳ ಗ್ರಾಮಾಂತರ ಠಾಣೆಯಲ್ಲಿ ‌ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter