ಬಂಟ್ವಾಳ: ತುಳುನಾಡಿನ ಜನ ಸಂಸ್ಕೃತಿ,ಆಚಾರಗಳನ್ನು ಅನುಸರಿಸಿ ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ; ಪರಮೇಶ್ವರ
ಬಂಟ್ವಾಳ :ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ತುಳು ಸಿರಿದೊಂಪ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಶಾಲೆಯ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್‌ಬುಲ್ಸ್ ವಿದ್ಯಾರ್ಥಿಗಳು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಪರಮೇಶ್ವರ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ತುಳುನಾಡಿನ ಸಂಸ್ಕೃತಿ, ಆಚರಣೆಗಳು, ಭಾಷೆ ಹಾಗೂ ತಿನಿಸುಗಳು ಇಲ್ಲಿನ ವಿಶಿಷ್ಟ ಪರಂಪರೆಯನ್ನು ಸಾರುತ್ತದೆ. ಇಂತಹ ಆಚರಣೆಗಳ ಅರಿವು ಎಲ್ಲರಿಗೂ ಅಗತ್ಯವಾಗಿದೆ. ತುಳುನಾಡಿನ ಜನರು ಸಂಸ್ಕೃತಿಯನ್ನು, ಆಚಾರಗಳನ್ನು ಅನುಸರಿಸಿ ಹೊಂದಾಣಿಕೆಯಿಂದ ಬಾಳುತ್ತಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲೆ ಶ್ರೀಮತಿ ಜೂಲಿ ಟಿ.ಜೆ. ವಹಿಸಿದ್ದರು. ವೇದಿಕೆಯಲ್ಲ ಉಪ ಪ್ರಾಂಶುಪಾಲೆ ಶ್ರೀಮತಿ ಪೂರ್ಣೇಶ್ವರಿ, ಸ್ಕೌಟ್ ಮಾಸ್ಟರ್ ಶ್ರೀ ಹರೀಶ್ ಆಚಾರ್ಯ, ಗೈಡ್ ಕ್ಯಾಪ್ಟನ್ ಶ್ರೀಮತಿ ಕೇಶವತಿ, ಕಬ್ ಮಾಸ್ಟರ್ ಶ್ರೀಮತಿ ಯೋಗಿನಿ, ಫ್ಲಾಕ್ ಲೀಡರ್ ಶ್ರೀಮತಿ ಅನಿತಾ ಡಿಸೋಜ ಮತ್ತು ಶ್ರೀಮತಿ ವಸಂತಿ ಮಾರ್ಗದರ್ಶನ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ತುಳುನಾಡಿನ ಪಾಡ್ದನ, ಕಥೆ, ಹಾಡು, ಗಾದೆ ಮಾತು, ಒಗಟುಗಳು, ಹುಲಿಕುಣಿತ, ಜಾನಪದ ನೃತ್ಯಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಿತು. 9ನೇ ತರಗತಿಯ ಗೈಡ್ಸ್ ಫಾತೀಮ ಇಶ್ರೀನ್ ಹಾಗೂ ಅನನ್ಯ ಎಂ ಕಾರ್ಯಕ್ರಮ ನಿರ್ವಹಿಸಿದರು.