ಸಾಹಿತ್ಯ ತಾರೆ ಮತ್ತು ಬಾಲಬಂಧು ಪ್ರಶಸ್ತಿಗೆ ಅರ್ಜಿ ಆಹ್ವಾನ

ಬಂಟ್ವಾಳ : “ಮಕ್ಕಳ ಕಲಾಲೋಕ” ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ವತಿಯಿಂದ 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು 2024ರ ನವಂಬರ್ ಎರಡನೇ ವಾರದಲ್ಲಿ ಶಂಬೂರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ  ಸಹಭಾಗಿತ್ವದಲ್ಲಿ ನಡೆಯಲಿದೆ.


ಈ ಸಂದರ್ಭ ತಾಲೂಕಿನಲ್ಲಿ 18ವರ್ಷ ಪ್ರಾಯದೊಳಗಿನ ಮಕ್ಕಳಿರುವ ಸರಕಾರಿ, ಅನುದಾನಿತ , ಅನುದಾನ ರಹಿತ ವಿದ್ಯಾಸಂಸ್ಥೆಗಳಲ್ಲಿ ಐದು ವರ್ಷಗಳ ಈಚೆಗೆ ಮಕ್ಕಳಿಗಾಗಿ ಸಾಹಿತ್ಯ ಹಾಗೂ ವಿವಿಧ ಕಲೆಗಳಲ್ಲಿ ಸಹಕರಿಸುತ್ತಿರುವ ಶಿಕ್ಷಕರು ಅಥವಾ ಸಾರ್ವಜನಿಕ ಕಲಾಗಾರರೊಬ್ಬರಿಗೆ ಸಮ್ಮೇಳನದಂದು ತಾಲೂಕು ಮಟ್ಟದ ಬಾಲಬಂಧು ಪುರಸ್ಕಾರವನ್ನು ನೀಡಲಾಗುತ್ತದೆ. ಅದೇ ರೀತಿ ಐದು ವರ್ಷಗಳ ಈಚೆಗೆ ಸಾಹಿತ್ಯಾದಿ ಕಲೆಗಳಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಂಡ ಸರಕಾರಿ, ಅನುದಾನಿತ ಯಾ ಅನುದಾನ ರಹಿತ ಒಂದು ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿಯನ್ನು ನೀಡಲಾಗುವುದು, ಆಯ್ದ ಒಂದು ವಿದ್ಯಾಸಂಸ್ಥೆಗೆ “ಸಾಹಿತ್ಯ ತಾರೆ” ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
2024 ಅಕ್ಟೋಬರ್ 31 ರೊಳಗೆ ರಮೇಶ ಎಂ. ಬಾಯಾರು, ಅಧ್ಯಕ್ಷರು. “ಮಕ್ಕಳ ಕಲಾ ಲೋಕ”  – ಸ್ಕಂದ- ಅಳಕೆ ಮಜಲು 574243 ಈ ವಿಳಾಸಕ್ಕೆ ತಲುಪಿಸುವಂತೆ “ಮಕ್ಕಳ ಕಲಾ ಲೋಕ”ದ ಪ್ರಕಟಣೆ ತಿಳಿಸಿದೆ.

.  

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter