ಕಳ್ಳಿಗೆ ಗ್ರಾಮದಲ್ಲಿ ಪೋಲಿಯೊ ಲಸಿಕೆಯ ಜಾಗೃತಿ ಜಾಥಾ
ಬಂಟ್ವಾಳ: ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಹಾಗೂ ಬ್ರಹ್ಮರಕೊಟ್ಲು ಸರಕಾರಿ ಶಾಲೆ ಯ ಆಶ್ರಯದಲ್ಲಿ” ವಿಶ್ವ ಪೋಲಿಯೊ ದಿನ”ವನ್ನು ಬಂಟ್ವಾಳ ತಾ.ನ ಕಳ್ಳಿಗೆ ಗ್ರಾಮದ ಬೀದಿಗಳಲ್ಲಿ ಪೋಲಿಯೊ ಲಸಿಕೆಯ ಬಗ್ಗೆ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಲಾಯಿತು.
ಮಕ್ಕಳಿರುವ ಮನೆಗಳ ಭೇಟಿ ನೀಡಿ ಕರಪತ್ರವನ್ನು ಹಂಚಲಾಯಿತಲ್ಲದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಹಿರಿಯ ರೋಟರಿ ಕ್ಲಬ್ ಸದಸ್ಯ ರೊ. ಪದ್ಮನಾಭ ರೈ ಅವರು ಜಾಥಕ್ಕೆ ಚಾಲನೆ ನೀಡಿದರು.
ಕ್ಲಬ್ ನ ಅಧ್ಯಕ್ಷರಾದ ಟಿ ಶೇಷಪ್ಪ ಮೂಲ್ಯ ಮಾತನಾಡಿ, ಪೋಲಿಯೊ ರೋಗ ಬಾರದಂತೆ ತಡೆಗಟ್ಟುವುದಕ್ಕಾಗಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಜಾಗೃತಿ ಅಭಿಯಾನ ಕೈಗೊಂಡು ವಿಶ್ವದಾದ್ಯಂತ ಪೋಲಿಯೊ ನಿರ್ಮೂಲನೆ ಗೆ ಪಣತೊಟ್ಟಿದ್ದು,ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದೆ.ಇದೀಗ ಕೇವಲ ಎರಡು ದೇಶಗಳಲ್ಲಿ ಮಾತ್ರ ಈ ರೋಗ ಪತ್ತೆಯಾಗಿದ್ದು,ಉಳಿದಂತೆ ಪೋಲಿಯೊ ಮುಕ್ತ ವಿಶ್ವವಾಗಲು ಸತತ ಪ್ರಯತ್ನ ಸಾಗಿದೆ ಎಂದರು.
ಕ್ಲಬ್ ನಕಾರ್ಯದರ್ಶಿ, ಕಳ್ಳಿಗೆ ಗ್ರಾಮಭಿವೃದ್ಧಿ ಸಂಘದ ಅಧ್ಯಕ್ಷ ಮಧುಸೂದನ್ ಶೆಣೈ, ದಿವಾಕರ ಪಂಬದಬೆಟ್ಟು, ಕ್ಲಬ್ ಸದಸ್ಯರಾದ ಸುಧೀರ್ ಶೆಟ್ಟಿ, ರಮೇಶ್ ನೆಟ್ಲ ಶಿಕ್ಷಕಿಯಯರಾದ ಭಾರತಿ, ಪ್ರಮೀಳಾ, ಮಮತಾ, ವಿಜಯಲಕ್ಸ್ಮಿ ಶೆಣೈ, ಸ್ವಾತಿ, ಮಕ್ಕಳ ಪೋಷಕರು, ಶಾಲಾ ಮಕ್ಕಳು ಪಥ ಸಂಚಲನ ಬ್ಯಾಂಡ್, ಘೋಷಣಾ ಫಲಕ ಹಾಗೂ ಘೋಷಣೆಗಳೊಂದಿಗೆ ಭಾಗವಹಿಸಿದರು. ಶಿಕ್ಷಕಿ ಪ್ಲೇವಿ ಪ್ರೀತಿ ಪೆರ್ನಾಂಡಿಸ್ ಸ್ವಾಗತಿಸಿ, ಮಂಜುಳಾ ವಂದಿಸಿದರು.