ಯಕ್ಷಾಶ್ರಯ ಯೋಜನೆಯಲ್ಲಿ ಕೀಲಿಕೈಯನ್ನು ಫಲಾನುಭವಿ, ಚೆಂಡೆ ವಾದಕರಾದ ಚಂದ್ರಶೇಖರವರಿಗೆ ಮನೆ ಹಸ್ತಾಂತರ
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಅವರ ಕನಸಿನ ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈಯನ್ನು ಫಲಾನುಭವಿಗಳಾದ ಶ್ರೀ ಧರ್ಮಸ್ಥಳದ ಮೇಳದ ಚೆಂಡೆ ವಾದಕರಾದ ಚಂದ್ರಶೇಖರವರಿಗೆ ಹಸ್ತಾಂತರ ಹಾಗೂ ಗೃಹಪ್ರವೇಶದ ಕಾರ್ಯಕ್ರಮ ನಡೆಯಿತು.

ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಉದ್ಯಮಿ ರಘುನಾಥ ಸೋಮಯಾಜಿಯವರ ಕೊಡುಗೆಯ ಈ ಮನೆಯ ಕೀಲಿಕೈಯನ್ನು ಹಸ್ತಾಂತರಿಸಿ,ಫಲಾನುಭವಿ, ಚೆಂಡೆ ವಾದಕರಾದ ಚಂದ್ರಶೇಖರವರನ್ನು ಗೌರವಿಸಲಾಯಿತು.
ಈ ಸಂದರ್ಭ ಕಲಾಪೋಷಕರಾದ ಆರ್. ಕೆ. ಭಟ್ ಬೆಂಗಳೂರು, ಟ್ರಸ್ಟಿನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಟ್ರಸ್ಟಿನ ಸರಪಾಡಿ ಘಟಕದ ಸಂಚಾಲಕರಾದ ಸರಪಾಡಿ ಅಶೋಕ್ ಶೆಟ್ಟಿ, ಬಂಟ್ವಾಳ ಘಟಕದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಗೌರವಾಧ್ಯಕ್ಷರಾದ ಜಗನ್ನಾಥ ಚೌಟ, ಶ್ರೀಕಾಂತ್ ಅರಳ ಮತ್ತಿತರರು ಉಪಸ್ಥಿತರಿದ್ದರು.
ಸರಪಾಡಿ ಘಟಕದ ಕಾರ್ಯದರ್ಶಿಗಳಾದ ಧನಂಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು