ಕಿಶೋರ್ ಗೆಲುವು : ಸಿದ್ದಕಟ್ಟೆಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ
ಬಂಟ್ವಾಳ: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅಭೂತ ಪೂರ್ವ ಜಯಗಳಿಸಿದ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಚುನಾವಣೆಯ ಬಂಟ್ವಾಳ ಮಂಡಲದ ಚುನಾವಣಾ ಸಂಚಾಲಕರಾದ ಪ್ರಭಾಕರ ಪ್ರಭು ಅವರ ನೇತೃತ್ವದಲ್ಲಿ ನಡೆ್ ಈ ಸಂಭ್ರಮಾಚರಣೆಯಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಕುಲಾಲ್,ತಾ. ಪಂ. ಮಾಜಿ ಸದಸ್ಯರಾದ ರತ್ನಕುಮಾರ್ ಚೌಟ,ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಪೂಜಾರಿ, ದಾಮೋದರ ಪೂಜಾರಿ, ಉದಯ ಪೂಜಾರಿ, ಚಂದ್ರ ಪೂಜಾರಿ ಕುಕ್ಕಿಪಾಡಿ, ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ,ಪ್ರಮುಖರಾದ ನವೀನ್ ಹೆಗ್ಡೆ, ಚಂದ್ರಶೇಖರ ಕರ್ಪೆ, ಭೋಜ ಶೆಟ್ಟಿಗಾರ್, ದೀಪಕ್ ಶೆಟ್ಟಿಗಾರ್,ಚೇತನ್ ಕುಲಾಲ್,ನಿತೇಶ್ ಆರಂಬೋಡಿ,ದೇವಪ್ಪ ಗೌಡ, ಬೂಬ ಶೆಟ್ಟಿಗಾರ್,ಜಯವರ್ಮ ಜೈನ್,ಪ್ರಶಾಂತ್ ಉಪ್ಪಿರ,ಮತ್ತಿತರರು ಉಪಸ್ಥಿತರಿದ್ದರು.
ಶಾಸಕರಿಂದ ಅಭಿನಂದನೆವಿಧಾನಪರಿಷತ್ತಿಗೆ ಅತ್ಯಧಿಕ ಮತಗಳಿಂದ ಜಯಗಳಿಸಿದ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಚುನಾವಣಾ ಸಹ ಸಂಚಾಲಕರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಶಾಲು ಹೊದಿಸಿ ಅಭಿನಂದಿಸಿದರು.
ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹಾಗೂ ಬಿಜೆಪಿ ಬಂಟ್ವಾಳ ಮಂಡಲ ಸಮಿತಿ ಕೂಡ ಅಭಿನಂದಿಸಿದೆ.ಇವರ ಗೆಲುವಿನಲ್ಲಿ ಸಹಕರಿಸಿದ ಪಕ್ಷದ ಕಾರ್ಯಕರ್ತರು,ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.