ಯುವವಾಹಿನಿಯ 35ನೇ ಘಟಕ ಉದ್ಘಾಟನೆ
ಬಂಟ್ವಾಳ : ವಿದ್ಯೆಯಿಂದ ಸ್ವಾವಲಂಬಿ ಬದುಕು ಸಾಧ್ಯ ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಯುವವಾಹಿನಿಯ ಕೊಡುಗೆ ಅಪಾರ ಎಂದು ನಾರಾಯಣಗುರು ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಶೈಲೇಂದ್ರ ವೈ ಸುವರ್ಣ ಹೇಳಿದ್ದಾರೆ.
ಕೊಂಬೆಲ್ ವಿಶಾಲ್ ಗಾರ್ಡನ್ ಕೊಂಬೆಲ್ ಸಭಾಂಗಣದಲ್ಲಿ ಯುವವಾಹಿನಿಯ 35 ನೇ ಪೆರ್ಮಂಕಿ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
![](https://www.suddi9.com/wp-content/uploads/2024/10/IMG-20241024-WA0014-650x365.jpg)
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಅವರು ಸಭಾಧ್ಯಕ್ಷತೆ ವಹಿಸಿ ನೂತನ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದಿಸಿದರು.ಕರ್ನಾಟಕ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ,
ಮಲ್ಲೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾಜಾರಾಮ್ ಕೋಟ್ಯಾನ್ , ಪೆರ್ಮಂಕಿ
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಭಜನಾ ಮಂದಿರ ಅಧ್ಯಕ್ಷ ಪ್ರವೀಣ್ ಅಂಚನ್, ಗುರುನಗರ ಸತ್ತಿಕಲ್ಲು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ದೀಕ್ಷಿತ್ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಇದೇ ವೇಳೆ ನವೆಂಬರ್ 10ರಂದು ನಡೆಯುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು, ಈ ಸಂದರ್ಭದಲ್ಲಿ ವಿಶುಕುಮಾರ್ ದತ್ತಿನಿಧಿ ಸಂಚಾಲಕ ಸುರೇಶ್ ಪೂಜಾರಿ, ಹಾಗೂ ದತ್ತಿನಿಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಹಾಗೆಯೇ ಯುವವಾಹಿನಿ ಸಂಸ್ಥೆಯ ಮಾಸಿಕ ಪತ್ರಿಕೆ ಯುವಸಿಂಚನವನ್ನು ಬಿಡುಗಡೆಗೊಳಿಸಲಾಯಿತು. ಯುವಸಿಂಚನ ಸಂಪಾದಕ ದಿನಕರ್ ಡಿ ಬಂಗೇರ ಹಾಗೂ ಸಂಪಾದಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಪಾಲನ್ ನೂತನ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು
ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಪಾಲನ್, ಸಮಾಜ ಸೇವಾ ನಿರ್ದೇಶಕರಾದ ಜಯರಾಮ್ ಪೂಜಾರಿ, ಶ್ರೀ ಗುರು ಚೆಂಡೆ ಸೆಟ್ ಪೆರ್ಮಂಕಿ ಇದರ ಪರವಾಗಿ ನಾಗೇಶ್ ಬಜಿಲೊಟ್ಟು, ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾ ಪ್ರತಿಭೆ ರಕ್ಷಿತ್.ಡಿ.ಬಂಗೇರ ಅವರನ್ನು ಅಭಿನಂದಿಸಲಾಯಿತು.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ಸ್ವಾಗತಿಸಿದರು. ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಪ್ರಸ್ತಾವನೆಗೈದರು. ಯುವವಾಹಿನಿ ಉಡುಪಿ ಘಟಕದ ಉಪಾಧ್ಯಕ್ಷ
ದಯಾನಂದ್ ಉಪ್ಪೂರು ಹಾಗೂ ವಿದ್ಯಾ ರಾಕೇಶ್ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರೇಖಾ ಗೋಪಾಲ್ ವಂದಿಸಿದರು.