ಪಡಿತರ ವಿತರಣೆಯ ಸರ್ವರ್ ಸಮಸ್ಯೆ ನಿವಾರಿಸುವಂತೆ ಆಗ್ರಹ
ಬಂಟ್ಚಾಳ: ನ್ಯಾಯ ಬೆಲೆ ಅಂಗಡಿಗಳಲ್ಲಿಬಿ.ಪಿ.ಎಲ್ ಹಾಗೂ ಅಂತ್ಯೋದಯ ಕುಟುಂಬಗಳಿಗೆ ಪಡಿತರ ಸಾಮಾಗ್ರಿ ವಿತರಣೆಯ ವೇಳೆ ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಹಕರಿಗೆ ತೊಂದರೆ ಅನುಭವಿಸುತ್ತಿದ್ದು,ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಪ್ರಭಾಕರ ಪ್ರಭು ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಿಗೆ ಲಿಖಿತ ಮನವಿ ಮಾಡಿದ್ದಾರೆ.

ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ನ್ಯಾಯ ಬೆಲೆ ಅಂಗಡಿಗಳಲ್ಲಿ ದಿನಂಪ್ರತಿ ನೂರಾರು ಗ್ರಾಹಕರು ಬೆಳಂಬೆಳಗ್ಗೆ ಪಡಿತರ ಸಾಮಾಗ್ರಿ ಪಡೆಯಲು ಬರುತ್ತಿದ್ದು , ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಸಿಗದೇ ಬರೊಗೈಯಲ್ಲಿ ವಾಪಸ್ಸು ಹೋಗುತ್ತಿದ್ದಾರೆ.ತಿಂಗಳಿನ ಪಡಿತರ ಪಡೆಯಲು 4-5 ದಿನ ಗ್ರಾಹಕರು ತಮ್ಮ ಕೆಲಸ ಬಿಟ್ಟು ಸರತಿನಿಂತು ಕೊನೆಗೆ ಸರ್ವರ್ ಸಮಸ್ಯೆಯಿಂದ ಬರಿಗೈಯಲಗಲಿ ವಾಪಸ್ ತೆರಳುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ಬಡ ಕುಟುಂಬಗಳಿಗೆ ಹಣಕಾಸಿನ ಅಡಚಣೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಸಾಧ್ಯವಾಗದ ಗ್ರಾಹಕರು ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಸಮಸ್ಯೆ ಹಲವು ತಿಂಗಳುಗಳಿಂದ ಸಮಸ್ಯೆಯಾಗಿಯೇ ಮುಂದುವರಿದಿದ್ದು , ಶಾಶ್ವತ ಪರಿಹಾರ ಕಂಡಿಲ್ಲವಾಗಿದೆ. ಬಿ.ಪಿ.ಎಲ್ ಕುಟುಂಬಗಳಿಗೆ ಸಹಕಾರಿಯಾಗುವಂತೆ ಪಡಿತರ ಪಡೆಯುವಲ್ಲಿನ ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.