ವೇಷ ಹಾಕಿ ನಿಧಿಸಂಗ್ರಹ: ಖಾಯಿಲೆಯಿಂದ ಬಳಲುತಿರುವ ಮಗುವಿಗೆ ಹಸ್ತಾಂತರ
ಬಂಟ್ವಾಳ :ತಾಲೂಕಿನ ಕಲ್ಲಡ್ಕ ಸಮೀಪದ ರಾಯಪ್ಪಕೋಡಿ ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂಧರ್ಭದಲ್ಲಿ ವೇಷ ಹಾಕಿ ಸಂಗ್ರಹವಾದ ಮೊತ್ತವನ್ನು’ ಬುಡ್ ಚಿಯಾರಿ ಸಿಂಡ್ರೋಮ್ ಖಾಯಿಲೆಯಿಂದ ಬಳಲುತಿರುವ ಮೂರುವರ್ಷದ ಮಗುವಿಗೆ ಹಸ್ತಾಂತರಿಸಲಾಯಿತು.
ಪುತ್ತೂರಿನ ರಂಜನ್ ಎಂಬವರ 3 ವರ್ಷದ ಮಗು ಅಗಸ್ತ್ಯ ಕೃಷ್ಣ ನಿಗೆ ವೇಷಹಾಕಿ ಸಂಗ್ರಹವಾದ 37 ಸಾ.ರೂ.ಮೊತ್ತವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ದೀಕ್ಷಿತ್ ಆಚಾರ್ಯ, ಮೋಹಿತ್ ಆಚಾರ್ಯ, ರಕ್ಷಿತ್ ಆಚಾರ್ಯ, ಶ್ರೀಧರ್ ಆಚಾರ್ಯ, ಹರಿಪ್ರಸಾದ್, ಮಿಥುನ್, ಯಶ್ವಿನ್ ಕಲ್ಲಡ್ಕ, ಪ್ರವೀಣ್ ರಾಯಪ್ಪಕೋಡಿ, ಜಗದೀಶ್ ರಾಯಪ್ಪಕೋಡಿ, ಸೋಹನ್ ಕಲ್ಲಡ್ಕ ಭಾಗವಹಿಸಿದ್ದರು.
ಕಳೆದ ವರ್ಷವು ಈ ತಂಡ ಕೂಡ ವೇಷಹಾಕಿ ಸಂಗ್ರಹವಾದ 23 ಸಾ.ರೂ.ಮೊತ್ತವನ್ನು ಕಾವ್ಯ ವೆಂಬ 11 ವರ್ಷದ ಬಾಲಕಿಗೆ ನೀಡಲಾಗಿತು.ಶ್ರೀ ದುರ್ಗಾ ಸೇವಾ ಸಮಿತಿಯ ಐ
ಸೇವಾ ಕಾರ್ಯಕ್ಕೆ ಮೆಚ್ಚುಗೆಗೆ ಪಾತ್ರವಾಗಿದೆ.