ಬಂಟ್ವಾಳ: ಪರ್ಯಾಯ ರಸ್ತೆ ವ್ಯವಸ್ಥೆ ಭರವಸೆ ನೀಡಿದ ಶಾಸಕರು, ಜಿಲ್ಲಾಡಳಿತ, ನಾಳೆಯ ಪ್ರತಿಭಟನೆ ಕೈಬಿಟ್ಟ ಪೊಳಲಿ ಜನರು
ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಬಿರುಕು ಬಿಟ್ಟಿದೆ ಎಂದು ಜಿಲ್ಲಾಡಳಿತ ಆ ಸೇತುವೆಯನ್ನು ಬಂದ್ ಮಾಡಿತ್ತು. ಇದರಿಂದ ಘನ ವಾಹನಗಳು ಹೋಗದಂತೆ ನಿರ್ಬಂಧ ಹೇರಲಾಗಿತ್ತು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆಯನ್ನು ಕೂಡ ನೀಡಲಾಗಿತ್ತು. ಅಧಿಕಾರಗಳ ಉಢಾಪೆ ಕಾರಣದಿಂದ, ಕೊನೆಗೆ ಅಲ್ಲಿ ಜನರಿಗೆ ಕಾಣಿಸಿಕೊಂಡ ದಾರಿ ಪ್ರತಿಭಟನೆ. ಮಂಗಳವಾರ ಪ್ರತಿಭಟನೆ ಮಾಡುವುದಾಗಿ ಅಂದರೆ ನಾಳೆ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಭಾನುವಾರದಂದು ತುರ್ತು ಸಭೆಯನ್ನು ಸೇರಿಸಿ ನಿರ್ಣಯ ಕೈಗೊಂಡಿತು. ಆದರೆ ಇಂದು ಸ್ಥಳಕ್ಕೆ ಧಾವಿಸಿದ ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನ್ ಭಟ್, ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬೇಡಿ. ಇದಕ್ಕೆ ಪರ್ಯಾಯ ಮಾರ್ಗದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಇಂದು ಬೆಳಿಗ್ಗೆ ಶಾಸಕರು ಕೂಡ ಭೇಟಿ ನೀಡಿ, ಪ್ರತಿಭಟನೆ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇದೀಗ ಶಾಸಕರು ನೀಡಿದ ಭರವಸೆ ಮೇರೆಗೆ ನಾಳೆ ನಡೆಯುವ ಪ್ರತುಭಟನೆಯನ್ನು ಕೈಬಿಡಲಾಗಿದೆ.
ಪರ್ಯಾಯ ವ್ಯವಸ್ಥೆಯ ಬಗ್ಗೆ ಲೋಕಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ನಮ್ಮ ತಾಲೂಕು ಅಧಿಕಾರಿಗಳ ಜತೆಗೆ ಮಾತನಾಡಿದ್ದೇವೆ. ಇದರ ಜತೆಗೆ ಜಿಲ್ಲಾಧಿಕಾರಿಗಳ ಮುಂದೆ ನಿಮ್ಮ ಕೂರಿಸಿ ಇದರ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು. ಒಂದು ವಾರದ ಒಳಗೆ ನಾವು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪರ್ಯಾಯ ವ್ಯವಸ್ಥೆ ಬಗ್ಗೆ ಶಾಸಕರ ಭರವಸೆ
ಇನ್ನು ಇದಕ್ಕೂ ಮುನ್ನ ಇಂಜಿನಿಯರ್ ಹೇಮಂತ್ ಕೂಡ ಸ್ಥಳಕ್ಕೆ ಬಂದ್ ಮನವಿ ಮಾಡಿದ್ದಾರೆ. ಆದರೆ ಶಾಸಕರು ಹೇಳಿದ್ರೆ ಮಾತ್ರ ನಾವು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸ್ಥಳೀಯ ಮುಖಂಡರು ಹೇಳಿದರು. ನಂತರ ದೇವಸ್ಥಾನಕ್ಕೆ ಬಂದ ಶಾಸಕರಲ್ಲಿ ನಾವು ಈ ಬಗ್ಗೆ ಪರ್ಯಾಯ ವ್ಯವಸ್ಥೆಯನ್ನು ಖಂಡಿತ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇನ್ನು ತಾತ್ಕಾಲಿಕ ರಸ್ತೆಯನ್ನು ಮಾಡಲು ಈ ಬಗ್ಗೆ ಖಾಸಗಿ ಜಾಗಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನ್ ಭಟ್ ಅವರು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ಸಚಿನ್ ಹಾಗೂ ಸ್ಥಳೀ ಜಯರಾಮ್ ಕೃಷ್ಣ ಪೊಳಲಿ, ವೆಂಕಟೇಶ್ ನಾವುಡ, ಚಂದ್ರಹಾಸ್ ಪಲ್ಲಿಪಾಡಿ,ಅಬೂಬಕ್ಕರ್ ಅಮ್ಮುಜೆ , ಕಿಶೋರ್ ಪಲ್ಲಿಪಾಡಿ, ಲೋಕೇಶ್ ಪೊಳಲಿ, ಯುಪಿ ಇಬ್ರಾಹಿಂ, ಪ್ರಸಾದ್ ಪೊಳಲಿ, ಬಸೀರ್ ಗಾಣೆಮಾರ್ ಹಾಗೂ ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದರು.