ಕೈಕಂಬ: ಗುರುಪುರ ಕೈಕಂಬ-ಪೊಳಲಿ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಒಂದಲ್ಲಾ ಒಂದು ಘಟನೆಯ ಮೂಲಕ ಪ್ರದೇಶದಲ್ಲಿ ಅಶಾಂತಿ ಉಂಟಾಗುವಂತೆ ಮಾಡಲು ಯತ್ನಿಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.
ಇತ್ತೀಚೆಗೆ ಕೈಕಂಬದಿಂದ ಪೊಳಲಿಗೆ ಹೋಗುವ ರಸ್ತೆಯ ಕಾಜಿಲಕ್ಕೆ ಹೋಗುವ ತಿರುವು ರಸ್ತೆಯಲ್ಲಿ ಕಾಜಿಲದ ಉತ್ಸಾಹಿ ಯುವಕರು ಬಸ್ ಸ್ಟ್ಯಾಂಡ್ ನಿರ್ಮಿಸಿ ಅಲ್ಲೊಂದು ಬಜರಂಗದಳದ ಕಟ್ಟೆ ನಿರ್ಮಿಸಿದ್ದರು. ಕಟ್ಟೆಯಲ್ಲಿ ಭಗವಧ್ವಜ ಬಹಳ ಸಮಯದಿಂದ ಇತ್ತು. ಆದರೆ ನಿನ್ನೆ ಯಾರೋ ಅಪರಿಚಿತ ಕಿಡಿಗೇಡಿಗಳು ಧ್ವಜದಿಂದ ಭಗವಧ್ವಜವನ್ನೇ ಕಿತ್ತೆಸೆದಿದ್ದಲ್ಲದೆ ಧ್ವಜಸ್ತಂಭವನ್ನು ಧ್ವಂಸಗೊಳಿಸಿದ್ದಾರೆ.
ಕೆಲ ತಿಂಗಗಳ ಹಿಂದೆ ಅಡ್ಡೂರು ಎಂಬಲ್ಲಿ ವಿವೇಕಾನಂದ ರಸ್ತೆಗೆ ಹಾಕಲಾಗಿದ್ದ ಸೂಚನಾಫಲಕವನ್ನು ಧ್ವಂಸಗೊಳಿಸಿ ಹಾನಿಗೊಳಿಸಿದ ಘಟನೆ ನಡೆದಿತ್ತು.



