ಕೈಕಂಬ: ದತ್ತಮಾಲಾಧಾರಿಗಳು ಮತಾಂಧರ ದಾಳಿಗೆ ತತ್ತರಿಸಿ ತನ್ನ ಯಾತ್ರೆಯನ್ನು ಅರ್ಧದಲ್ಲೇಮೊಟಕುಗೊಳಿಸಿ ಆಸ್ಪತ್ರೆಪಾಲಾದ ಘಟನೆ ಗುರುಪುರ ಸಮೀಪದ ಉಳಾಯಿಬೆಟ್ಟು ಎಂಬಲ್ಲಿನ ಪೆರ್ಮಂಕಿ ಎಂಬಲ್ಲಿ ಸೆ.5ರ ರಾತ್ರಿ ಸಂಭವಿಸಿದೆ. ಅಪರಿಚಿತ ಮತಾಂಧ ಯುವಕರು ದತ್ತನಮಾಲಾಧಾರಿಗಳ ವಾಹನದ ಮೇಲೆ ನಿಗೂಢ ಸ್ಥಳದಿಂದ ಕಲ್ಲೆಸೆದಿದ್ದಲ್ಲದೆ, ಕಲ್ಲೇಟಿನ ಪರಿಣಾಮ  ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಉಳಾಯಿಬೆಟ್ಟುವಿನಲ್ಲಿ ಉದ್ವಿಗ್ನತೆ ನೆಲೆಸಿದ್ದು ಪೊಲೀಸರು ಬೀಡುಬಿಟ್ಟಿದ್ದಾರೆ.

ಘಟನೆಯ ವಿವರ: ಪೆರ್ಮಂಕಿಯ ಶಿವರಾತ್ರಿಬೆಟ್ಟು ಎಂಬಲ್ಲಿ ಹಲವಾರು ಹಿಂದೂ ಯುವಕರು ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಹೊರಟು ನಿಂತಿದ್ದರು. ಈ ವೇಳೆ ಟೆಂಪೋ ಉಳಾಯಿಬೆಟ್ಟು ಕಡೆಯಿಂದ ಪರಾರಿ ಸಮೀಪಕ್ಕೆ ಬರುವಾಗ ಮತಾಂಧ ಯುವಕರು ವಾಹನದ ಮೇಲೆ ಕಲ್ಲೆಸೆದಿದ್ದಾರೆ. ಆದರೆ ಇದು ವಾಹನದ ಮೇಲೆ ಬೀಳಲಿಲ್ಲ. ಇದು ದತ್ತಪೀಠಕ್ಕೆ ಹೊರಟು ನಿಲ್ಲುವ ಸ್ಥಳಕ್ಕೆ ಬಂದಿತ್ತು. ಇದಾದ ಸ್ವಲ್ಪ ಹೊತ್ತಿನ ನಂತರ ಇನ್ನಷ್ಟು ದತ್ತಮಾಲಾಧಾರಿಗಳು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಅವರನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡ ಅವರ ಮೇಲೆ ಗಂಭೀರ ಹಲ್ಲೆ ನಡೆಸಿತು ಎನ್ನಲಾಗಿದೆ.

ಘಟನೆಯಿಂದ ಭಯಗೊಂಡ ಹಲ್ಲೆಗೊಳಗಾದವರ ಮನೆಯವರು ಹಲ್ಲೆಗೊಳಗಾದವರನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿ, ಪೊಲೀಸರಿಗೆ ದೂರು ನೀಡಲು  ಹೋಗುತ್ತಿದ್ದಾಗ ಮತ್ತೆ ಎದುರಾದ ಮತಾಂಧರ ಪಡೆ ತಲವಾರು ಝಳಪಿಸಿ ಮತ್ತಷ್ಟು ಹಲ್ಲೆ ನಡೆಸಿ ಗಂಭಿರವಾಗಿ ಗಾಯಗೊಳಿಸಿತು ಎನ್ನಲಾಗಿದೆ. ಘಟನೆಯಿಂದ 8 ಮಂದಿ ದತ್ಸ್ಥತಮಾಲಾಧಾರಿಗಳಿಗೆ ಗಂಭೀರ ಗಾಯವಾಗಿದೆ. ಈ ಪೈಕಿ ಇಬ್ಸ್ಥಬರು ಹೆಣ್ಳಣುಮಕ್ದಕಳ ಮೇಲೆಯೂ ದಾಳಿ ನಡೆದಿದೆ. ಸ್ಥಳದಲ್ಲಿ  ಉದ್ವಿಗ್ನತೆ ನೆಲೆಯಾಗಿದ್ದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಹಲವರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ತತ್ತರಿಸಿದ ದತ್ತಮಲಾಧಾರಿಗಳು ತನ್ನ ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ.

ಕಲ್ಲುತೂರಾಟದಿಂದ ಕೆಲವೊಂದು ಮನೆಗಳ ಮೇಲೆಯೂ ದಾಳಿ ನಡೆದಿದ್ದಲೇ ಅಲ್ಲದೆ ಅದರ ಕಿಡಿ ವಾಮಂಜೂರು ಕಡೆಯೂ ವ್ಯಾಪಿಸಿತ್ತು ಎನ್ನಲಾಗಿದೆ. ಅಲ್ಲಿಯೂ ಒಟ್ಟಾದ ಕಿಡಿಗೇಡಿಗಳು ಗಲಾಟೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಜ್ರದೇಹಿ ಭೇಟಿ: ಗಾಯಾಳುಗಳು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳುಗಳನ್ನು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಭೇಟಿ ಮಾಡಿ ಸಾಂತ್ವಾನ ನುಡಿದಿದ್ದಾರೆ ಎಂದು ತಿಳಿದುಬಂದಿದೆ.

ದತ್ತಮಾಲಾಧಾರಿಗಳ ಹಲ್ಲೆ ನಡೆಸಿ ಕೋಮುವಿಷಬೀಜ ಬಿತ್ತುವ ಮತಾಂಧರ ಯೋಜನೆ ಇದಾಗಿರಬಹುದೆಂದು ಶಂಕಿಸಲಾಗಿದೆ. ಕಂಕನಾಡಿ ಪೊಲೀಸರು ವ್ಯಾಪಕ ಬಂದೋಬಸ್ತ್ ನಡೆಸಿದ್ದಾರೆ.

2

3

1-6

 

By suddi9

Leave a Reply

Your email address will not be published. Required fields are marked *