ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ, ಕೈಕಂಬ ಇಲ್ಲಿನ ವಿದ್ಯಾಥರ್ಿಗಳು “ಮಕ್ಕಳ ಸುರಕ್ಷತಾ ಸಪ್ತಾಹ” ದ
ಅಂಗವಾಗಿ ಜಾಗೃತಿ ಜಾಥ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಶಾಲಾ ಸಂಚಾಲಕ ಜೆ.ಬಿ.ಸಿಕ್ವೇರ ಜಾಥಾವನ್ನು ಉದ್ಘಾಟಿಸಿ “ಮಕ್ಕಳ
ಸುರಕ್ಷತೆ ನಮ್ಮೆಲ್ಲರ ಕರ್ತವ್ಯ” ಎಂದರು. ಶಾಲಾ ಮುಖ್ಯ ಶಿಕ್ಷಕರಾದ ಮಹೇಶ್ ಶೆಟ್ಟಿ, ಸ್ವರ್ಣಲತಾ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ನಂತರ ವಿದ್ಯಾಥರ್ಿಗಳು ಪೇಟೆಯಲ್ಲಿ ಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು. ಶಿಕ್ಷಕ ವನರ್ೆನ್ ನಿರೂಪಿಸಿ ವಂದಿಸಿದರು.
