ಉಡುಪಿ: ತಡರಾತ್ರಿ ಬಸ್ಸಿನಲ್ಲಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಅನಾಹುತ
![](https://www.suddi9.com/wp-content/uploads/2024/10/WhatsApp-Image-2024-10-05-at-10.07.37-PM-650x448.jpeg)
ಚಲಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾದ ಬಳಿ ನಡೆದಿದೆ. ಮಂಗಳೂರಿನಿಂದ ಉಡುಪಿಯತ್ತ ಬರುತ್ತಿದ್ದ ಮಂಜುನಾಥ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಮೂಲ್ಕಿಯಿಂದ ಹೆಜಮಾಡಿಗೆ ಬರುವಾಗ ಟೈಯರ್ ನಲ್ಲಿ ಬೆಂಕಿ ಬೆಂಕಿ ಕಾಣಿಸಿಕೊಂದಿದ್ದು, ಒಂದು ಕಿ.ಮೀ ಮುಂದೆ ಸಾಗಿದ ಬಳಿಕ ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಾಗ ಚಾಲಕ ತಕ್ಷಣ ಎಚ್ಚೆತ್ತುಕೊಂಡು ಹೆಜಮಾಡಿ ಟೋಲ್ ಗೇಟ್ ಬಳಿ ಬಸ್ ನಿಲ್ಲಿಸಿದ್ದಾರೆ. ಆ ತಕ್ಷಣ ಟೋಲ್ ಪ್ಲಾಜಾದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಬಳಿಕ ಘಟನಾ ಸ್ಥಳಕ್ಕೆ ಬಂದ ಆದಾನಿ ಪವರ್ ಪ್ಲಾಂಟ್ ಅಗ್ನಿಶಾಮಕದಿಂದ ಬೆಂಕಿ ನಂದಿಸಲಾಯಿತು. ಬಸ್‌ನ ತಾಂತ್ರಿಕ ದೋಷವೇ ಈ ಅವಘಢಕ್ಕೆ ಕಾರಣ ಎನ್ನಲಾಗಿದ್ದು, ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.