ಪ್ರೌಢಶಾಲಾ ವಿಭಾಗದ ಬಾಲಕ- ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2024
ಬಂಟ್ವಾಳ: ದ.ಕ. ಜಿ. ಪಂ. ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂಶ್ರೀರಾಮ ಪ್ರೌಢ ಶಾಲೆ ಅರ್ಕುಳ,ಫರಂಗಿಪೇಟೆ ಇವರ ಸಹಯೋಗದೊಂದಿಗೆಮಂಗಳೂರು ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ- ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2024 ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.

ಅಂತರಾಷ್ಟ್ರೀಯ ಕ್ರೀಡಾಪಟು ಸದಾನಂದ ಆಳ್ವತೇವು ಅವರು ಧ್ವಜಾರೋಹಣ ಗೈದು,ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ ಎಚ್. ಆರ್. ಈಶ್ವರ್ ಅತಿಥಿಯಾಗಿದ್ದರು.

ಅರ್ಕುಳಶ್ರೀರಾಮ ವಿದ್ಯಾಸಂಸ್ಥೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ ಕೆ ಜಯರಾಮ ಶೇಕ ಅಧ್ಯಕ್ಷತೆ ವಹಿಸಿದ್ದರು. ಅರ್ಕುಳಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕ ಎ. ಗೋವಿಂದ ಶೆಣೈ, ಬಿ ಎಸ್ ಎನ್ ಎಲ್ ನ ನಿವೃತ್ತ ಅಧಿಕಾರಿ ಕಂಪ ಸದಾನಂದಆಳ್ವ ,ಜಿ.ಪಂ.ಮಾಜಿ ಸದಸ್ಯ ಕೆ. ರವೀಂದ್ರ ಕಂಬಳಿ,ಶಾಲಾ ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಸುಂದರ ಶೆಟ್ಟಿ ಕಲ್ಲತಡಮೆ, ಫರಂಗಿಪೇಟೆ ರೋಟರಿ ಅಧ್ಯಕ್ಷ ಅರ್ಜುನ್ ಪೂಂಜಾ, ಶಾಲಾ ಆಡಳಿತ ಸಮಿತಿ ಸದಸ್ಯರಾದ ಝಫ್ರೂಲ್ಲಾ ಒಡೆಯರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ ಕಲ್ಲತಡಮೆ, ಕಾರ್ಯದರ್ಶಿ ದಿನೇಶ್ ಆರ್. ಕೊಟ್ಟಿಂಜ ವೇದಿಕೆಯಲ್ಲಿದ್ದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ್ ಪ್ರಸ್ತಾವನೆಗೈದರು. ಸಂಸ್ಥೆಯ ಮುಖ್ಯಸ್ಥರಾದ ಕೆ. ಆರ್. ದೇವದಾಸ ಸ್ವಾಗತಿಸಿದರು, ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಕುಮಾರ್ ವಂದಿಸಿದರು. ಭುವನೇಶ್ವರಿ ನಿರೂಪಿಸಿದರು.