ಕರ್ನಾಟಕ ಪ್ರೌಢ ಶಾಲೆಯಲ್ಲಿ ಗಾಂಧಿ ಜಯಂತಿ – ಹಿಂದಿ ದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಗಾರ
ಬಂಟ್ವಾಳ: ಐದು ಭಾಷೆ ಬಲ್ಲವರ ಐಕ್ಯೂಲೆವೆಲ್ ಅಸಾಮಾನ್ಯವಾಗಿದ್ದು, ಬುದ್ಧಿವಂತಿಕೆಯಿಂದ ಶಿಕ್ಷಣ ಪಡೆದು ಕಲಿಸಿದ ಶಿಕ್ಷಕರಿಂದ “ಸರ್” ಎಂದು ಸಂಬೋಧಿಸಲ್ಪಡುವವರಾಗಬೇಕು ಎಂದು ಸರಕಾರಿ ಪ್ರೌಢ ಶಾಲೆ ಗೋಳ್ತಮಜಲಿನ ಹಿಂದಿ ಶಿಕ್ಷಕ ಶಂಕರ್ ವೆಂಕಪ್ಪ ಪಾವಸ್ಕರ್ ನುಡಿದರು.

ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ನಡೆದ ಗಾಂಧಿ ಜಯಂತಿ ಹಿಂದಿ ದಿವಸ್ ಮತ್ತು ಶೈಕ್ಷಣಿಕ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಿವರ್ಧಕ ಸಂಘ (ರಿ)ಮಾಣಿ ಇದರ ಅಧ್ಯಕ್ಷ ರೊ. ಕಿರಣ್ ಹೆಗ್ಡೆ ಮಾತನಾಡಿ ಸತ್ಯಾಗ್ರಹ ಎನ್ನುವ ಅಸ್ತ್ರ ಕೊಟ್ಟು ಶಾಂತಿ – ಸಹನೆ ಗಾಂಧೀಜಿ ಕಲಿಸಿದರೆ, ಅತ್ಯುನ್ನತ ಹುದ್ದೆಯಲ್ಲಿದ್ದರೂ ಅತ್ಯಂತ ಸರಳವಾಗಿ ಬದುಕಿ ಮಾದರಿಯಾದವರು ಶಾಸ್ತ್ರಿ ಜೀ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇದರ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಂದೀಶ್ ವೈ.ಡಿ. ಜೀವನ ಕೌಶಲ್ಯ ಎಂಬ ವಿಷಯದಲ್ಲಿ ಅತ್ಯುತ್ತಮ ತರಬೇತಿ ನೀಡಿದರು.
ಇದೇ ಸಂದರ್ಭ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಭವ್ಯಶ್ರೀ ಮತ್ತು ವಿಜೇತ್ ರಿಗೆ ಸನ್ಮಾನ, ಹಿಂದಿ ವಿಷಯದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಸಂಘಗಳಲ್ಲಿ ಪರಿಪೂರ್ಣವಾಗಿ ತಮ್ಮನ್ನು ತೊಡಗಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾಗಾಂಧಿ ಸ್ಮೃತಿ ಕಾರ್ಯಕ್ರಮ ನಡೆಸಿದರು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಇಬ್ರಾಹಿಂ ಕೆ.,ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ, ಹಿರಿಯ ಶಿಕ್ಷಕ ಎನ್. ಗಂಗಾಧರ ಗೌಡ ಹಿಂದಿ ಶಿಕ್ಷಕಿ ಪವಿತ್ರ,ಗೈಡ್ಸ್ ಕ್ಯಾಪ್ಟನ್ ಶ್ಯಾಮಲಾ ಕೆ.ಮತ್ತಿತರಿದ್ದರು ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ಪ್ರಸ್ತಾವಿಸಿ, ಸ್ವಾಗತಿಸಿದರು.ಸಂಘದ ಅಧ್ಯಕ್ಷೆ ಫಾತಿಮತ್ ಸಾರಾ ತ್ವಯಿಬಾ ವಂದಿಸಿದರು, ಜಮೀಹ ಮತ್ತು ಮರ್ಯಂ ಸ್ವಾಬಿರಾ ನಿರೂಪಿಸಿದರು. ಶಾಲಾ ನಾಯಕ ಎಸ್ . ಅಬ್ದುಲ್ ರಹೀಮ್,ಮಹಮ್ಮದ್ ಹಫೀಝ್, ಮಹಮ್ಮದ್ ಇರ್ಫಾಝ್ ,ವಿಶಾಲ್, ಶ್ರೀಜಿತ್ ಅಬ್ದುಲ್ ಖಾದರ್ ಬಾಶಿತ್, ಮಹಮ್ಮದ್ ರಾಫಿಲ್, ಯಶೋಧ, ಮೈತ್ರಿ ಸಹಕರಿಸಿದರು.