Published On: Fri, Oct 4th, 2024

ಬಂಟ್ವಾಳ: ಎರಡು ಬೈಕ್​​​​​ಗಳ ನಡುವೆ ಢಿಕ್ಕಿ, ಒಬ್ಬ ಬೈಕ್​​ ಸವಾರ ಸಾವು

ಮಾರ್ನಬೈಲು: ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿ ಸಮೀಪದ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಅ.2ರಂದು ಎರಡು ಬೈಕ್​​​​ ಸವಾರರ ನಡುವೆ ರಸ್ತೆ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಬೈಕ್​​​​ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಬರಿಮಾರು ನಿವಾಸಿ ಸರ್ಪಾಝ್ (33) ಎಂದು ಗುರುತಿಸಲಾಗಿದೆ.

ಸರ್ಪಾಝ್ ತನ್ನ ತಂಗಿಯನ್ನು ದೇರಳಕಟ್ಟೆ ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಮೆಲ್ಕಾರ್ ನಿಂದ ಮುಡಿಪು ಮಾರ್ಗವಾಗಿ ಮಾರ್ನಬೈಲು ಬರುತ್ತಿದ್ದಾಗ ಎದುರಿನಿಂದ ಬೈಕ್​​ನಲ್ಲಿ ಬಂದ ಇಂಮ್ತಿಯಾಜ್ ಎಂಬಾತ ಢಿಕ್ಕಿ ಹೊಡೆದಿದ್ದಾನೆ.

ಢಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಬೈಕ್​​ನವರು ರಸ್ತೆಗೆ ಬಂದು ಬಿದ್ದಿದ್ದಾರೆ. ತಕ್ಷಣ ಇಬ್ಬರನ್ನೂ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸರ್ಪಾಝ್ ಸಾವನ್ನಪ್ಪಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter