ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷದ ಸಂಭ್ರಮದ ಬಂಟ್ವಾಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ” ಗಾಂಧಿ ನಡಿಗೆ”
ಬಂಟ್ವಾಳ: ಗಾಂಧಿ ಅದ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷದ ಸಂಭ್ರಮದ ಪ್ರಯುಕ್ತ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪಕ್ಷದ ಕಾರ್ಯಕರ್ತರಿಂದ ಬುಧವಾರ ” ಗಾಂಧಿ ನಡಿಗೆ” ನಡೆಯಿತು
ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ರಥಬೀದಿಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಹಾಗೂ ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ಕಾಂಗ್ರೆಸ್ ಕಚೇರಿಯಿಂದ ಏಕಕಾಲದಲ್ಲಿ ಗಾಂಧಿನಡಿಗೆ ಆರಂಭಗೊಂಡು ಬಿ.ಸಿ.ರೋಡು ಉದ್ಯಾನವನದ ಬಳಿರುವ ಸ್ಪರ್ಶ ಕಲಾ ಮಂದಿರದಲ್ಲಿ ಸಂಪನ್ನಗೊಂಡಿತು.
ಬಳಿಕ ನಡೆದ ಸಭಾ ಕಾರ್ಯಕ್ತಮವನ್ನು ಮಾಜಿ ಸಚಿವ,ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಅವರು ಉದ್ಘಾಟಿಸಿ ಗಾಂಧಿಜಯಂತಿಯ ಸಂದೇಶ ಸಾರಿದರು.ಬಂಟ್ವಾಳ ಬ್ಲಾಕ್ ನ ಉಸ್ತುವಾರಿ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಭಾವ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಪುರಸಭಾಧ್ಯಕ್ಷ ವಾಸುಪೂಜಾರಿ,ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್,ತಾಲೂಕು ಗ್ಯಾರಂಟಿ ಯೋಜನಾ ಸಮಿತಿಅಧ್ಯಕ್ಷೆ ಜಯಂತಿ ಪೂಜಾರಿ,ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರಜೈನ್,ಮಾಜಿತಾ.ಪಂ. ಅಧ್ಯಕ್ಷರಾದ ಸುದರ್ಶನ್ ಜೈನ್,ಪದ್ಮನಾಭ ರೈ, ಮಾಜಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ,ಕೆಪಿಸಿಸಿ ಕಾರ್ಯದರ್ಶಿ ಪಿಯೂಸ್ ಎಲ್ ರೋಡ್ರಿಗಸ್ ,ಬ್ಲಾಕ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್,ಚಂದ್ರಶೇಖರ ಭಂಡಾರಿ,ಮಾಜಿ ಅಧಗಯಕ್ಷ ಸುದೀಪ್ ಕುಮಾರ್ ರೈ,ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ,ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ,ಪಕ್ಷದ ಮುಖಂಡರಾದ ಸುರೇಶ್ ಜೋರ,ದೇವಪ್ಪಕುಲಾಲ್ ,ಇಬ್ರಾಹಿಂ ನವಾಜ್,ಬಿ.ಮೋಹನ್,ವೆಂಕಪ್ಪಪೂಜಾರಿ ಬಂಟ್ವಾಳ,ಚಿತ್ತರಂಜನ್ ಶೆಟ್ಟಿ,ನಾರಾಯಣ ನಾಯ್ಕ್,ಜನಾರ್ದನ ಚಂಡ್ತಿಮಾರ್,ಐಡಾ ಸುರೇಶ್,ಸಿದ್ದೀಕ್ ,ರಜಾಕ್ ಇರಾ ಮೊದಲಾದವರಿದ್ದರು.ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಇದಕ್ಕು ಮೊದಲು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿಯ ಪ್ರಯುಕ್ತ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ತೊಡಂಬಿಲ ತಮ್ಮ ನಿವಾಸದ ಪಕ್ಕದಲ್ಲಿರುವ ಗಾಂಧಿ ಕಟ್ಟೆಗೆ ಪುಷ್ಪಾರ್ಚನೆ ಗೈದರು.