ಸಿದ್ದಕಟ್ಟೆ ಹಾ.ಉ.ಸ.ಸಂಘಕ್ಕೆ 29.56 ಲ.ರೂ.ಲಾಭ: ರತ್ನಕುಮಾರ್ ಚೌಟ
ಬಂಟ್ವಾಳ: ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘವು 2023-24 ಸಾಲಿನಲ್ಲಿ 15.17 ಕೋ.ರೂ.ವ್ಯವಹಾರ ನಡೆಸಿ29.56 ಲಕ್ಷ ರೂ.ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ ತಿಳಿಸಿದ್ದಾರೆ.
ಸಂಘ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಟ್ ಹಾಗೂ1.26 ಪೈಸೆ ಬೋನಸನ್ನು ಈ ಸಂದರ್ಭ ಪ್ರಕಟಿಸಿದರು.

ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾದ ಕೇಶವ ಅವರು ಜಾನುವಾರು ವಿಮೆ,ಕರು ಸಾಕಣಿಕೆ,ಪಶು ಆಹಾರ,ಲವಣಮಿಶ್ರಣ,ಜಂರುಹುಳದ ಔಷಧಿ ನೀಡುವ ಬಗ್ಗೆ ಮಾಹಿತಿ ನೀಡಿದರು.
ವಿಸ್ತರಣಾಧಿಕಾರಿ ಜಗದೀಶ್ ಅವರುಒಕ್ಕೂಟದ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.ಇದೇವೇಳೆ ಎಸ್ ಎಸ್ ಎಲ್ ಸಿ,ಪಿಯುಸಿ ಹಾಗೂ ಪದವಿ ಕಲಿಯುವ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಹಾಲುಹಾಕುವಂತ ಸದಸ್ಯರಿಗೆ ಪ್ರೋತ್ಸಾಹ ಉಡುಗೊರೆಯನ್ನಿತ್ತು ಗೌರವಿಸಲಾಯಿತು.
ಅದೇರೀತಿ ಹೆಚ್ಚು ಹಾಲು ಹಾಕುವ ಸದಸದಯರು ಮತ್ತು ಇಡೀವರ್ಷ ಹಾಲು ಹಾಕಿದ ಸದಸ್ಯರಿಗೂ ಸ್ಮರಣಿಕೆಯನ್ನಿತ್ತು ಪ್ರೋತ್ಸಾಹಿಸಲಾಯಿತು.
ಸಂಘದ ಉಪಾಧ್ಯಕ್ಷ ಗೋವಿಂದ,ನಿರ್ದೇಶಕರಾದ ನಾರಾಯಣ ಶೆಟ್ಟಿ,ಅರುಣ.ವಿ.,ನವೀನ್ ಹೆಗ್ಡೆ,ಸತೀಶ್ ಪೂಜಾರಿ,ಗೋಪಾಲಕೃಷ್ಣಪ್ರಭು,ಲೋಕೇಶ್ ಪೂಜಾರಿ,ಗಣೇಶ್ ಶೆಟ್ಟಿ,ಸೀತಾನಾಯ್ಕ್,ವಾಸು ಮುಗೇರ,ದಾಮೋದರ ನಾಯ್ಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ನಾಯಕ್ ವರದಿವಾಚಿಸಿ,ಲೆಕ್ಕಪತ್ರ ಮಂಡಿಸಿದರು.ನಿರ್ದೇಶಕ ಗುಣಪಾಲ ಶೆಟ್ಟಿ ಸ್ವಾಗತಿಸಿದರು.