ಶ್ರೀ ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಕಾನೂನು ಕ್ರಮಕ್ಕೆ ಆಗ್ರಹ
ಬಂಟ್ವಾಳ : ಕೋಟ್ಯಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ಇದು ಸಮಸ್ತ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು,ಈ ಬಗ್ಗೆ ದೂರು ದಾಖಲಿಸಿ ತಪ್ಪತಸ್ಥರನ್ನು ಬಂದಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದೇವಸ್ಥಾನಗಳ ಮಹಾಸಂಘ ಪ್ರಮುಖ ಯೋಗೀಶ್ ಅವರು ಆಗ್ರಹಿಸಿದ್ದಾರೆ.
ಬಂಟ್ವಾಳ ಪರಿಸರಿದ ವಿವಿಧ ದೇವಾಲಯಗಳ ಮುಖ್ಯಸ್ಥರ ನಿಯೋಗದೊಂದಿಗೆ ತಹಶೀಲ್ದಾರ್ ಡಿ.ಅರ್ಚನಾ ಭಟ್ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆಗೊಳಿಸಿರುವ ಅವರು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸುವುದು ಕೇವಲ ಕಲಬೆರಕೆ ಅಲ್ಲದೆ ಹಿಂದೂಗಳ ಧರ್ಮಶ್ರದ್ಧೆಯ ಮೇಲೆ ಮಾಡಿರುವ ಧಾರ್ಮಿಕ ಆಘಾತವಾಗಿದೆ ಎಂದು ತಿಳಿಸಿದ್ದಾರೆ.
ಲಡ್ಡು ಪ್ರಸಾದದ ಪ್ರಕರಣ ಮಾತ್ರವಲ್ಲ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಅವರ ತಂದೆ ರಾಜಶೇಖರ ರೆಡ್ಡಿ ಅವರ ಕಾಲದಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿತ ತೆಗೆದುಕೊಂಡುರುವ ಎಲ್ಲಾ ನಿರ್ಣಯದ ಬಗ್ಗೆಯು ವಿಸ್ತೃತವಾದ ತನಿಖೆಯನ್ನು ನಡೆಸಬೇಕು,ಆ ಸಂದರ್ಭದಲ್ಲಿ ಹಿಂದೂ, ಧರ್ಮವಿರೋಧಿ ನಿರ್ಣಯ ತೆಗೆದುಕೊಂಡಿದ್ದರೆ, ಅವೆಲ್ಲವನ್ನು ತಕ್ಷಣವೇ ರದ್ದು ಪಡಿಸಬೇಕೆಂದು ಯೋಗೀಶ್ ಆಂಧ್ರಪ್ರದೇಶ ಸರಕಾರವನ್ನು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಕೆಯನಿಯೋಗದಲ್ಲಿ ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ಲ. ಲೋಕನಾಥ್ ಶೆಟ್ಟಿ,ಶ್ರೀ ರಕ್ತೇಶ್ವರೀ ದೇವಸ್ಥಾನದ ಅಧ್ಯಕ್ಷರಾದ ಬಿ.ವಿಶ್ವನಾಥ್ ,ಟ್ರಸ್ಟಿ ಗೋಪಾಲ್ ಸುವರ್ಣ ಶ್ರೀ ಕುಂಭೋದರಿ ದೇವಸ್ಥಾನದ ಅಧ್ಯಕ್ಷರಾದ ಯೋಗೀಶ್ ಬಿ. ಸಿ ರೋಡ್, ಜನಾರ್ಧನ್ ಬೆಂಜನಪದವು, ಸೋಮನಾಥ್ ಬಂಟ್ವಾಳ, ವಸಂತ್ ಬೆಂಜನ ಪದವು, ಜಯಕುಮಾರ್ ಸಜಿಪ, ಗೀತಾ ಜನಾರ್ಧನ್ ಬೆಂಜನಪದವು ಮೊದಲಾದವರಿದ್ದರು