ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮಂಥನ ಕಾರ್ಯಕ್ರಮ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೇದವ್ಯಾಸ ಸಭಾಂಗಣದಲ್ಲಿ ಮಂಥನ ಕಾರ್ಯಕ್ರಮವು ನಡೆಯಿತು. ಗಣ್ಯರಿಂದ ದೀಪಪ್ರಜ್ವಲನಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅತಿಥಿಯಾಗಿಭಾಗವಹಿಸಿದ್ದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಮಾಹೆ)ನ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಶ್ರೀರಾಜ್ ಗುಡಿ ಯವರು “ವಂಗ ಭಂಗದಿಂದ ಬಂಗ ಬಂಧು ಭಂಜನದ ವರೆಗೆ ಜಾಗತಿಕ – ರಾಜಕೀಯ ದೃಷ್ಟಿಯಲ್ಲಿ ಬಂಗ್ಲಾದೇಶ” ಎಂಬ ವಿಷಯದ ಕುರಿತು ವಿಷಯ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರು ವಹಿಸಿದ್ದರು.
ಶ್ರೀರಾಮ ಪದವಿ ವಿದ್ಯಾಲಯದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಶ್ರೀಮಾನ್ ಸ್ವಾಗತಿಸಿದರು, ಶಿಶುಮಂದಿರದ ಅಭಿವ್ಯದ್ಧಿ ಸಮಿತಿಯ ಸದಸ್ಯೆ ಶಾಂತಲಕ್ಷ್ಮಿ ವೈಯಕ್ತಿಕ ಗೀತೆ ಹಾಡಿದರು. ಪದವಿ ಪೂರ್ವ ವಿಭಾಗದ ಇತಿಹಾಸ ಉಪನ್ಯಾಸಕರಾದ ರಮೇಶ್ ಶ್ರೀಮಾನ್ ವಂದಿಸಿದರು.