Published On: Tue, Oct 1st, 2024

ಸಂಸ್ಕೃತಿ ನಾಶವಾದರೆ ಭಾಷೆ ನಾಶ: ಪ್ರೋ.ತುಕರಾಮ್ ಪೂಜಾರಿ

ಬಂಟ್ವಾಳ: ಸಂಸ್ಕೃತಿ ನಾಶವಾದರೆ ಭಾಷೆ ನಾಶವಾಗುತ್ತದೆ. ಒಂದು ಭಾಷೆಯ ಬಳಕೆ ಕಡಿಮೆಯಾದರೆ ಆ ಭಾಷೆ ನಿಧಾನವಾಗಿ ಅಳಿವಿನಂಚಿಗೆ ಹೋದಂತೆ. ಹಾಗಾಗಿ ಕನ್ನಡ ಸಂಸ್ಕೃತಿ ನಾಶವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ  ಅದ್ಭುತ ಸಾಹಿತ್ಯದ ಕನ್ನಡ ಭಾಷೆಯನ್ನು ಉಳಿಸುವ  ಅನಿವಾರ್ಯತೆ ಕನ್ನಡಿಗರಾದ ನಮಗೆ ಉಂಟಾಗಿದೆ. ಆ ನಿಟ್ಟಿನಲ್ಲಿ ಕನ್ನಡ ಶಿಕ್ಷಕರ ಪಾತ್ರ ಶ್ರೇಷ್ಠವಾದದ್ದು “ಎಂದು ಬಿ.ಸಿ.ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ, ಪ್ರೋ. ಡಾ. ತುಕರಾಂ ಪೂಜಾರಿ  ಅವರು ಹೇಳಿದ್ದಾರೆ.


ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಬಂಟ್ವಾಳ ತಾಲೂಕು ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ನಡೆದ ಕನ್ನಡ ಭಾಷಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಕಾರ್ಯಾಗಾರದ ಉದ್ಘಾಟನೆಯನ್ನು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥನ್ ನೆರವೇರಿಸಿ ” ಕನ್ನಡ ಮಾತೃಭಾಷೆಯನ್ನು ಪ್ರೀತಿಸಬೇಕು. ಕನ್ನಡದ ಬಳಕೆಯನ್ನು ಬೆಳೆಸಬೇಕು. ಆ ನಿಟ್ಟಿನಲ್ಲಿ ಕನ್ನಡ ಭಾಷಾ ಶಿಕ್ಷಕರ ಜವಾಬ್ದಾರಿ ಮಹತ್ತರವಾದದ್ದು ” ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ವಿಶ್ವನಾಥ ಬಂಟ್ಟಾಳ ವಹಿಸಿದ್ದರು.   ಪಾಣೆಮಂಗಳೂರು ಹೋಬಳಿ ಅಧ್ಯಕ್ಷರಾದ ಮಹಮ್ಮದ್ ನಂದಾವರ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ  ವಿ.ಸು ಭಟ್  ಸ್ವಾಗತಿಸಿದರು. ಗೌರವ  ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter