ಮೊಡಂಕಾಪು: ದೀಪಿಕಾ ಪ್ರೌಢಶಾಲೆ 60 ನೇ ವರ್ಷಾಚರಣೆ ಸಮಿತಿ ಅಧ್ಯಕ್ಷರಾಗಿ ರಾಕೇಶ ಮಲ್ಲಿ ಆಯ್ಕೆ
ಬಂಟ್ವಾಳ:ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಡಿ.14ರಂದು ನಡೆಯಲಿರುವ ’60ನೇ ವರ್ಷಾಚರಣೆ’ ಸಮಿತಿ ಅಧ್ಯಕ್ಷರಾಗಿ ಇಂಟಕ್ ಸಂಘಟನೆಯ ಮುಖಂಡ ರಾಕೇಶ ಮಲ್ಲಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೆ.ಸತೀಶ್ ಭಂಡಾರಿ, ಶಿವಪ್ರಸಾದ್ ಪ್ರಭು, ಕೆ.ಎಚ್.ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಅರುಣ್ ರೋಶನ್ ಡಿಸೋಜ, ಜೊತೆ ಕಾರ್ಯದರ್ಶಿಯಾಗಿ ಸತೀಶ ಶೆಟ್ಟಿ, ಕೋಶಾಧಿಕಾರಿಯಾಗಿ ಜೋನ್ ಗೋಮ್ಸ್, ವಿಲ್ಫ್ರೆಡ್ ಎಂ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸತೀಶ ಪಲ್ಲಮಜಲು ಆಯ್ಕೆಗೊಂಡಿದ್ದಾರೆ ಎಂದು ಹಿರಿಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಜೇಶ್ ಸಾಲಿಯಾನ್ ತಿಳಿಸಿದ್ದಾರೆ.