ಶ್ರೀ ಕ್ಷೇ. ಧ.ಗ್ರಾ. ಯೋಜನೆಯಿಂದ ನೂತನ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನದ ಮಂಜುರಾತಿ ಪತ್ರ ಹಸ್ತಾಂತರ
ಬಂಟ್ವಾಳ : ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕೊಳಲ ಬಾಕಿಮಾರು ಎಂಬಲ್ಲಿ ನೂತನ ಅಂಚೆ ಕಛೇರಿಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜುರಾದ 50 ಸಾ.ರೂ.ವಿನ ಮಂಜುರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ರವರು ಕಟ್ಟಡ ಸಮಿತಿ ಅಧ್ಯಕ್ಷರಾದ ಬೂಬಸಪಲ್ಯ ಮುಂಡಬೈಲು ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮೂಡುಪಡುಕೋಡಿ ಶಾಖಾ ಅಂಚೆ ಪಾಲಕರಾದ ಮಹಮ್ಮದ್ ಕಲೀಲ್, ಕಟ್ಟಡ ಸಮಿತಿ ಸದಸ್ಯರಾದ ದಿನೇಶ್ ಮೂಲ್ಯಬಂಗೇರೆ ಕೆರೆ, ಹರೀಶ್ ಶೆಟ್ಟಿ ಬಂಗೇರೆಕೆರೆ, ಲೋಕಯ್ಯ ಗೌಡ ಬಂಗೇರೆಕೆರೆ, ಶೀನ ಬಂಗೇರ ಶುಭಮುಂಡ ಬೈಲು, ರಾಮಚಂದ್ರ ಭಟ್ ಹೊಸಬೆಟ್ಟು, ಸತೀಶ್ ಸಪಲ್ಯ ಮುಂಡ ಬೈಲು, ಕೇಶವ ಮುಂಡ ಬೈಲು, ವಗ್ಗ ವಲಯದ ಮೇಲ್ವಿಚಾರಕರಾಕಿ ಸವಿತಾ,ವಲಯದ ಸೇವಾ ಪ್ರತಿನಿಧಿಗಳಾದ ಸುಮಿತ್ರಾ, ಭಾರತಿ, ಮಾಧವ, ಮಧ್ವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಮೋಹನಂದ ಕುಲಾಲ್ ಮುಂಡಬೈಲು, ಚೆನೈತ್ತೋಡಿ ಕಾರ್ಯ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಯಶೋಧರ ಸಪಲ್ಯರವರು ಮೊದಲಾದವರಿದ್ದರು.