ಜಗನ್ಮಾತೆಯ ಆರಾಧನೆಯ ಪ್ರಯುಕ್ತ ಪೊಳಲಿಯ ರಾಮಕೃಷ್ಣ ತಪೋವನ ಆಶ್ರಮದಲ್ಲಿ ಅಕ್ಟೋಬರ್ 4 ರಿಂದ 13ರ ವಿಜಯ ದಶಮಿಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 4 ರಿಂದ 13ರವರೆಗೆ ಪ್ರತೀ ನಿತ್ಯ ಬೆಳಗ್ಗೆ ಮತ್ತು ಸಂಜೆಯ ವೇಳೆ ಜಿಲ್ಲೆಯ ವಿವಿಧ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮಗಳು, ಪ್ರತಿನಿತ್ಯ 11.30ರಿಂದ 12.30ರ ವರೆಗೆ ನವದುರ್ಗೆಯ ಒಂದೊಂದು ರೂಪಕ್ಕೆ ಕುಮಾರಿ ಪೂಜೆ ಮತ್ತು ಶ್ರೀ ಚಂಡೀ ಪಾರಾಯಣ ನಡೆಯಲಿದೆ.

ಅಕ್ಟೋಬರ್ 9 ಬುಧವಾರದಂದು ನವರಾತ್ರಿ ಪ್ರಯುಕ್ತ ರಾಮಕೃಷ್ಣ ತಪೋವನ ಯಕ್ಷಗಾನ ಕೇಂದ್ರದ ಮಕ್ಕಳಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯದಲ್ಲಿ ಸಂಜೆ 8.00ರಿಂದ ಬಬ್ರುವಾಹನ ಕಾಳಗ ಮತ್ತು ಅಗ್ರಪೂಜೆ ಎಂಬ ಯಕ್ಷಗಾನ ಪ್ರದರ್ಶನವಿರಲಿದೆ. ವಿಜಯ ದಶಮಿಯಂದು ದುರ್ಗಾ ಹೋಮ, ವಿಶೇಷ ಭಜನೆ, ನವದುರ್ಗೆಯವರಿಗೆ ಕುಮಾರಿ ಪೂಜೆ, ಆರತಿ ಸೇರಿದಂತೆ ಮಧ್ಯಾಹ್ನದ ವೇಳೆ ಅನ್ನ ಸಂತರ್ಪಣೆ ಕಾರ್ಯಕ್ರಮವು ನೆರವೇರಲಿದೆ.

By Suddi9

Leave a Reply

Your email address will not be published. Required fields are marked *