ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಬಜಪೆ ಎಡಪದವು ವಲಯದ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ.
ಕೈಕಂಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಬಜಪೆ ಎಡಪದವು ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ,ಎಡಪದವು ವಲಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಎಡಪದವು ವಲಯ ,ಆಖಿಲಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಎಡಪದವು ವಲಯ ಇವರ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಸೆ.೨೯ ರಂದು ಭಾನುವಾರ ಎಡಪದವು ಶ್ರೀರಾಮ ಮಂದಿರದ ಪಟ್ಟಾಭಿರಾಮ ಸಭಾಭವನದಲ್ಲಿ ಜರಗಿತು. ಸತ್ಯನಾರಾಯಣ ಪಜಾ ವಿಧಿವಿಧಾನಗನ್ನು ಎಡಪದವು ಸುರೇಶ್ ತಂತ್ರಿ ನೆರವೇರಿಸಿದರು. ಉತ್ತರ ಶಾಸಕ ಡಾ,ವೈ ಭರತ್ ಶೆಟ್ಟಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.


ಸಭಾ ಕಾರ್ಯಕ್ರಮ:
ಮುಚ್ಚೂರು ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ರಾಮ ಮಂದಿರ ಟ್ರಸ್ಟ್ ಇದರ ಅಧ್ಯಕ್ಷ ಸುರೇಶ್ ದೇವಾಡಿಗ ವಹಿಸಿದರು.


ಡಾ. ವಾದಿರಾಜ ಕಲ್ಲೂರಾಯ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ, ಉಧ್ಯಮಿ ಚಂದ್ರಹಾಸ ಶೆಟ್ಟಿ ನಾರಳ,ಎಡಪದವು ವಲಯಾಧ್ಯಕ್ಷ ಹರೀಶ್ ನಾÊಕ್,ಬಜ್ಪೆ ಯೋಜನಾಧಿಕಾರಿಗಳು ಕರುಣಾಕರ ಆಚಾರ್ಯ.ಜನ ಜಾಗೃತಿ ವೇದಿಕೆಯ ಎಡಪದವು ವಲಯದ ಅಧ್ಯಕ್ಷ ಚಂದ್ರಶೇಖರ ಎಸ್ , ಸೇವಾ ಪ್ರತಿನಿಧಿ ಗಂಗಾದರ ಸ್ವಾಗತಿಸಿದರು. ಪೂಜಾರಿ ನೇತ್ರಾವತಿ ವರದಿ ವಾಚಿಸಿದರು. ಕೇಶವ ಕೊಂಪದವು ವಂದಿಸಿದರು. ಸಂಘದ ಸದಸ್ಯ ಕುಶಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಸಂಘದ ಸದಸ್ಯರಿಂದ ಸಾಂಸ್ಕೃ ತಿಕ ಕಾರ್ಯಕ್ರಮ ನಡೆಸಿಕೊಟ್ಟರು.