ಕೈಕಂಬ: ದ್ವಿಚಕ್ರ ವಾಹನದ ಸೀಟ್ ಕೆಳಗಡೆ ನುಸುಳಿ ಕೂತಿದ್ದ ಕನ್ನಡಿ(ಕಂದಡಿ)ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಕುಪ್ಪೆಪದವಿನಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ಸವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿ ಸೈಬರ್ ಸೆಂಟರ್ ನಡೆಸುತ್ತಿರುವ ಇಮ್ತಿಯಾಜ್ ಎಂಬವರು ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮಸೀದಿಗೆ ಹೋಗಿ ಅಲ್ಲಿಂದ ಮನೆಗೆ ತೆರಳಲು ತನ್ನ ಇಲೆಕ್ಟ್ರಿಕ್ ಸ್ಕೂಟರ್ ಬಳಿ ಬಂದು ಸ್ಕೂಟರ್ ನ ಸೀಟ್ ತೆರೆದು ಕಾಗದ ಪತ್ರಗಳನ್ನು ಇಡುವ ವೇಳೆ ಸೀಟಿನ ಕೆಳಗಡೆ ಇದ್ದ ಹಾವು ಬೆರಳಿಗೆ ಕಚ್ಚಿದೆ. ತಕ್ಷಣ ಇಮ್ತಿಯಾಜ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಳಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಹಾವು ಒಳಭಾಗಕ್ಕೆ ಹೇಗೆ ಹೋಗಿ ಸೇರಿಕೊಂಡಿತು ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವ ವಾಹನ ಸವಾರರೇ ಹುಷಾರ್. ಪಾರ್ಕ್ ಮಾಡಿದ್ದ ವಾಹನ ಚಲಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ ಮುಂದುವರಿಯಿರಿ.

By suddi9

Leave a Reply

Your email address will not be published. Required fields are marked *